ಡೆಡ್ಲಿ ಸೋಂಕು ಕೊರೊನಾ ಪರಿಚಯಿಸಿದ ಚೀನಾ ಇಡೀ ಮನುಕುಲವೇ ನಲಗುವಂತೆ ಮಾಡಿದೆ.
ಈ ಸೋಂಕಿನಿಂದಾಗಿ ತೊಂದರೆ ಅನುಭವಿಸದವರಿಲ್ಲ.
ವಿಶೇಷವಾಗಿ ವೈದ್ಯರು ತಮ್ಮ ವೈಯಕ್ತಿಕ ಬದುಕನ್ನೇ ಮರೆತು ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ್ದಾರೆ ನಿಜಕ್ಕೂ ಅವರ ಸೇವೆ ಶ್ಲಾಘನೀಯ.
ಜೀವದ ಹಂಗು ತೊರೆದು ಹೋರಾಡುತ್ತಿರೋ ವೈದ್ಯರ ಕರ್ತವ್ಯ ನಿಷ್ಠೆಗೆ ಎಷ್ಟು ಸಲಾಂ ಹೇಳಿದರೂ ಕಡಿಮೆಯೇ.
ಚಿಕಿತ್ಸೆ ನೀಡಿ ಜನರ ಪ್ರಾಣ ಕಾಪಾಡುವುದೊಂದಿಗೆ ಆಸ್ಸಾಂನ ವೈದ್ಯರೊಬ್ಬರು ನೃತ್ಯ ಮಾಡುವ ಮೂಲಕ ರೋಗಿಗಳನ್ನ ರಂಜಿಸಿದ್ದಾರೆ.
ಡಾ. ಸೈಯದ್ ಅಹಮದ್ ಎಂಬವರು ಶೇರ್ ಮಾಡಿರುವ ವಿಡಿಯೋದಲ್ಲಿ ಪಿಪಿಇ ಕಿಟ್ ಹಾಕಿದ ವೈದ್ಯ ಅನುಪ್ ಸೇನಾಪತಿ ವಾರ್ ಸಿನಿಮಾದ ಹಾಡಿಗೆ ಗುಂಗ್ರೂ ಡ್ಯಾನ್ಸ್ ಮಾಡಿ ಕೊರೊನಾ ರೋಗಿಗಳನ್ನ ಚಿಯರ್ ಅಪ್ ಮಾಡಿದ್ದಾರೆ.
ಡಾ. ಅನೂಪ್ ಸೇನಾಪತಿ ನೃತ್ಯದ ವಿಡಿಯೋ ಸಾಕಷ್ಟು ಸದ್ದು ಮಾಡಿದೆ.
PublicNext
20/10/2020 08:04 am