ಬೆಂಗಳೂರು: ಹೆಮ್ಮಾರಿ ಕೊರೊನಾ ಅನೇಕರನ್ನು ಬಲಿ ಪಡೆದುಕೊಂಡಿದೆ. ಈ ಮಧ್ಯೆ ಹೋಮ್ ಐಸೋಲೇಶನ್‌ನಲ್ಲಿದ್ದು ಚಿಕಿತ್ಸೆ ಪಡೆದುಕೊಳ್ಳುವವರಿಗೆ ಆಘಾತಕಾರಿ ಸುದ್ದಿಯೊಂದು ಹೊರ ಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಆದರೆ ಹೋಮ್ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದವರ ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಬೆಂಗಳೂರು ಸೇರಿದಂತೆರ ರಾಜ್ಯದಲ್ಲಿ ಹೋಮ್ ಐಸೂಲೇಷನ್ ಡೆತ್ ಹೆಚ್ಚುತ್ತಿದೆ. ಇದರಿಂದಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ತಜ್ಞ ವೈದ್ಯ ಡಾ.ವಿಶಾಲ್ ರಾವ್ ಅವರು, 'ಸೋಂಕು ಪತ್ತೆಯಾದ ಆರಂಭದ ಮೂರು ದಿನದಲ್ಲಿ ಆರೋಗ್ಯ ಸುಧಾರಣೆ ಆಗುತ್ತದೆ. ನಂತರ ನಾಲ್ಕನೇ ದಿನದ ಬಳಿಕ ಸೋಂಕಿತರಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಆಗುತ್ತದೆ. ಆಕ್ಸಿಜನ್ ಕಡಿಮೆ ಆಗುವುದು ಸೋಂಕಿತರ ಗಮನಕ್ಕೆ ಬರುವುದಿಲ್ಲ. ಕೊನೆಯ ಹಂತಕ್ಕೆ ಬಂದಾಗ ಇದು ತಿಳಿಯುತ್ತದೆ. ಆಗ ಗುಣಮುಖರಾಗುವುದು ಕಷ್ಟ. ಹೀಗಾಗಿ ಸಾವು ಸಂಭವಿಸುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೆ ಪರಿಹಾರವನ್ನು ತಿಳಿಸಿರುವ ವೈದ್ಯ ವಿಶಾಲ್ ಅವರು, 'ಸೋಂಕಿತರು ಪ್ರತಿದಿನ ಆಕ್ಸಿಜನ್ ಪ್ರಮಾಣವನ್ನು ತಿಳಿಯಬೇಕು. ಒಂದು ವೇಳೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ವೈದ್ಯರು ನೀಡಿರುವ ಮಾತ್ರೆಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಹೋಮ್ ಐಸೂಲೇಷನ್ ನಲ್ಲಿ ಇರುವವರು ಹೊರಗಡೆ ಎಲ್ಲೂ ಓಡಾಡಬಾರದು' ಎಂದು ಸಲಹೆ ನೀಡಿದ್ದಾರೆ.
PublicNext
19/10/2020 02:33 pm