ನವದೆಹಲಿ : ಕೊರೊನಾ ಸೋಂಕು, ಭಾರಿ ಮಳೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ , ಈ ವರ್ಷ ಹಿಂದಿಗಿಂತಲೂ ಹೆಚ್ಚಿನ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತೆಲಂಗಾಣ, ಆಂಧ್ರಪ್ರದೇಆ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮಳೆ ಚಳಿಯನ್ನೂ ಹೊತ್ತು ತಂದಿದೆ.
ಕಳೆದ ಎರಡು ದಿನಗಳಿಂದ ಚಳಿಯೂ ಹೆಚ್ಚಾಗಿದೆ. ಈ ಬಾರಿ ಅಧಿಕ ಪ್ರಮಾಣದ ಚಳಿ ಇರುವ ಕಾರಣ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಚಳಿಯಿಂದ ಅಧಿಕ ಸಾವು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಬಾರಿ ಹೆಚ್ಚು ಚಳಿ ಕಂಡುಬರುವುದಕ್ಕೆ ಲಾ ನಿನಾ ಎಂಬ ಹವಾಮಾನ ವೈಪರಿತ್ಯ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಹವಾಮಾನದಲ್ಲಿ ಬದಲಾವಣೆಯಾದಾಗ ವಾತಾವರಣದಲ್ಲಿನ ತಾಪಮಾನ ಏರಿಕೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಪ್ರತಿಕೂಲ ಹವಾಮಾನವನ್ನು ಎದುರಿಸಬೇಕಾಗುತ್ತದೆ.
ಡಿಸೆಂಬರ್ನಿಂದ ಫೆಬ್ರವರಿವರೆಗೆ ಇರುವ ಚಳಿಗಾಲದ ತೀವ್ರತೆ ಕುರಿತು ಮುನ್ಸೂಚನೆಯನ್ನು ಹವಾಮಾನ ಇಲಾಖೆ ಪ್ರತಿ ವರ್ಷ ನವೆಂಬರ್ನಲ್ಲಿ ಬಿಡುಗಡೆ ಮಾಡುತ್ತದೆ.
ಲಾ ನಿನಾ ಎಂದರೇನು? ಫೆಸಿಫಿಕ್ ಸಾಗರದ ಮೇಲ್ಮೈ ಬಿಸಿಯಾಗಿರುವುದನ್ನು ಎಲ್ ನಿನೋ ಎನ್ನಲಾಗುತ್ತದೆ. ಆದರೆ ಅದೇ ಸಾಗರದ ಮೇಲ್ಮೈ ತಣ್ಣಗಾದರೆ ಅದನ್ನು ಲಾನಿನಾ ಎಂದು ಕರೆಯಲಾಗುತ್ತದೆ.
ಮುಂಗಾರು ಮಾರುತಗಳ ಮೇಲೆ ಇವರೆರಡೂ ಕೂಡ ಪರಿಣಾಮ ಬೀರುತ್ತದೆ.
PublicNext
15/10/2020 08:49 am