ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಾದ್ಯಂತ 4 ತಿಂಗ್ಳಲ್ಲಿ 18 ಸಾವಿರ ಟನ್‌ ಕೋವಿಡ್‌ ತ್ಯಾಜ್ಯ ಸಂಗ್ರಹ!

ನವದೆಹಲಿ: ಭಾರತದಾದ್ಯಂತ ನಾಲ್ಕು ತಿಂಗಳಲ್ಲಿ 18 ಸಾವಿರ ಟನ್‌ನಷ್ಟು 'ಕೋವಿಡ್-19' ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗಿದೆ. ಇದರಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರವೇ ತಾಜ್ಯ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದತ್ತಾಂಶದ ಪ್ರಕಾರ, ಕಳೆದ ನಾಲ್ಕು ತಿಂಗಳಿನಲ್ಲಿ ಮಹಾರಾಷ್ಟ್ರ ಒಂದರಲ್ಲೇ 3,587 ಟನ್ ತ್ಯಾಜ್ಯ‌ ಶೇಕರಣೆಯಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ 1,737 ಟನ್‌, ಗುಜರಾತ್‌ನಲ್ಲಿ 1,638 ಟನ್‌, ಕೇರಳದಲ್ಲಿ 1,516 ಟನ್‌, ಉತ್ತರ ಪ್ರದೇಶದಲ್ಲಿ 1,432 ಟನ್, ದೆಹಲಿಯಲ್ಲಿ 1,400, ಕರ್ನಾಟಕದಲ್ಲಿ 1,380 ಟನ್ ಮತ್ತು‌ ಪಶ್ಚಿಮ ಬಂಗಾಳದಲ್ಲಿ 1,000 ಟನ್‌ ತ್ಯಾಜ್ಯ ಸಂಗ್ರಹವಾಗಿದೆ.

Edited By : Vijay Kumar
PublicNext

PublicNext

12/10/2020 06:46 pm

Cinque Terre

40.52 K

Cinque Terre

0