ನವದೆಹಲಿ: ಡೆಡ್ಲಿ ಸೋಂಕು ಕೊರೊನಾದಿಂದ ಬಚ್ಚಾವ್ ಆಗಲು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಗೆ ಜನ ಮೊರೆ ಹೋಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.
ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಸ್ಯಾನಿಟೈಸರ್ ಬಳಕೆ ಕೂಡಾ ಅಪಾಯಕಾರಿ.
ಹೌದು ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಮತ್ತು ಅಮೆರಿಕನ್ ಸೊಸೈಟಿ ಆಫ್ ಮೈಕ್ರೊಬಯಾಲಜಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ.
ಆಯಂಟಿ ಬಯಾಟಿಕ್ ರೆಸಿಸ್ಟೆನ್ಸ್ ಕುರಿತು ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ವೆಬಿನಾರ್ ನಲ್ಲಿ ಆಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಬಗ್ಗೆ ವಿವಿಧ ವಿಚಾರಗಳು ಚರ್ಚೆ ಆಗಿವೆ.
ಅತಿಯಾದ ಸ್ಯಾನಿಟೈಸರ್ ಹಾಗೂ ಆಯಂಟಿ ಮೈಕ್ರೋಬಿಯಲ್ ಸೋಪ್ ಗಳ ಬಳಕೆಯಿಂದ ಆಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಹೆಚ್ಚಾಗುವುದರಿಂದ ಪರಿಸ್ಥಿತಿ ಮತ್ತಷ್ಟು ವ್ಯತಿರಿಕ್ತವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಆಯಂಟಿ ಮೈಕ್ರೋಬಿಯಲ್ ಔಷಧಗಳಿಗೆ ರೋಗಕಾರಕ ಮೈಕ್ರೋಬ್ ಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದನ್ನು ಆಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ.
ಇದನ್ನು ಈಗಲೇ ಸರಿಯಾಗಿ ನಿರ್ವಹಿಸದಿದ್ದರೆ 2050ರ ಸುಮಾರಿಗೆ 1 ಕೋಟಿ ಮಂದಿ ಇದರ ಅಪಾಯ ಎದುರಿಸಬೇಕಾಗುತ್ತದೆ ಎಂಬ ಅಂದಾಜಿಸಲಾಗಿದೆ.
PublicNext
10/10/2020 11:07 pm