ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಕೈಯಲ್ಲಿ ಒಂದೇ ದಿನ ಉಸಿರು ಚಲ್ಲಿದ 1,089 ಜನ : 59 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ : ವಿಶ್ವಕ್ಕೆ ಕಂಟಕವಾಗಿರುವ ಡೆಡ್ಲಿ ಕೊರೊನಾದಿಂದಾಗಿ ದೇಶದಲ್ಲಿ ಒಂದೇ ದಿನದಲ್ಲಿ ಸೋಂಕಿನಿಂದ ಬಳಲಿದ 1,089 ಜನ ಸಾವನಪ್ಪಿದ್ದಾರೆ.

ಸೋಂಕಿರ ಸಂಖ್ಯೆ 59 ಲಕ್ಷದ ಗಡಿ ದಾಟಿದೆ.

ಇನ್ನೂ ದಿನವೊಂದರಲ್ಲಿ 85,362 ಮಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 59,03,933ಕ್ಕೆ ಏರಿಕೆಯಾಗಿದೆ.

ಇದೂವರೆಗೂ ದೇಶದಲ್ಲಿ 93,379 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 59,03,933 ಸೋಂಕಿತರ ಪೈಕಿ 9,60,969 ಸಕ್ರಿಯ ಪ್ರಕರಣಗಳಿದ್ದು, 48,49,585 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ನಿನ್ನೆ ಒಂದೇ ದಿನ 13,41,535 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ.

ಈ ಮೂಲಕ ಇದೂವರೆಗೂ 7,02,69,975 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

Edited By : Nirmala Aralikatti
PublicNext

PublicNext

26/09/2020 12:46 pm

Cinque Terre

69.9 K

Cinque Terre

0