", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/405356-1736483024-darma.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಜನವರಿ 12ರಿಂದ ಒಂದು ವಾರ ಕಾಲ ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಗಂಗಾಜಲ ಚೌಡೇಶ್ವರಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಯಾವುದೇ...Read more" } ", "keywords": "Haveri News, Animal Cruelty, Animal Sacrifice, Stop Animal Abuse, Karnataka Animal Welfare, Animal Rights, Haveri District News, Animal Protection,Haveri,Religion", "url": "https://publicnext.com/article/nid/Haveri/Religion" }
ಹಾವೇರಿ: ಜನವರಿ 12ರಿಂದ ಒಂದು ವಾರ ಕಾಲ ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಗಂಗಾಜಲ ಚೌಡೇಶ್ವರಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಯಾವುದೇ ಪ್ರಾಣಿಬಲಿಯಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ವಿಶ್ವ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದಸ್ವಾಮಿಜಿ ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರಲ್ಲಿ ಜನವರಿ 12 ರಿಂದ 18 ರವರೆಗೆ ಗಂಗಾಜಲ ಚೌಡೇಶ್ವರ ಜಾತ್ರೆ ನಡೆಯುತ್ತದೆ. ಜಾತ್ರೆ ನಡೆಯುವ ದಿನಗಳಲ್ಲಿ ದೇವಾಲಯದ ಮುಂಭಾಗ, ಹಿಂಭಾಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಅಲ್ಲದೆ ಪ್ರಾಣಿಗಳ ತೂರಾಟ ನಡೆಸಿ ಅಂಗಾಂಗಗಳ ನೈವಿದ್ಯ ಹಿಡಿಯಲಾಗುತ್ತದೆ. ಇದು ನಡೆಯಬಾರದು ಎಂದು ದಯಾನಂದಸ್ವಾಮೀಜಿ ಒತ್ತಾಯಿಸಿದರು.
ಈ ರೀತಿಯ ಘಟನೆಗಳು ನಡೆಯದಂತೆ ಹಾವೇರಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ದಯಾನಂದಸ್ವಾಮೀಜಿ ಮನವಿ ಮಾಡಿದರು. ಪ್ರಾಣಿಬಲಿಯಂತಹ ಹರಕೆ ಬಿಟ್ಟು ಭಕ್ತರು ಬೇರೆ ತರದ ಹರಕೆ ಕಟ್ಟಿಕೊಳ್ಳುವಂತೆ ಸ್ವಾಮೀಜಿ ಮನವಿ ಮಾಡಿದರು.
PublicNext
10/01/2025 09:53 am