ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಗಲಭೆಯಲ್ಲಿ ಗಾಯಗೊಂಡಿದ್ದ RSS ಕಾರ್ಯಕರ್ತರನ್ನು ಭೇಟಿಯಾದ ಸಚಿವ

ಹಾವೇರಿ: ಮಂಗಳವಾರ ರಾತ್ರಿ ಅನ್ಯಕೋಮಿನ ಯುವಕರ ದಾಳಿಯಿಂದ ಗಾಯಗೊಂಡಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿನ ಗಾಯಾಳುಗಳನ್ನ ಸಚಿವ ಪಾಟೀಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು ಗುರುರಾಜ ಕುಲಕರ್ಣಿ ತಲೆಗೆ ಗಾಯವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮ ಪಾಲಿಸುತ್ತಾರೆ. ಯಾರು ಮತ್ತೊಂದು ಧರ್ಮ ಆಚರಣೆಗಳಿಗೆ ಅಡ್ಡಿ ಮಾಡುವದಿಲ್ಲ.

ಈ ರೀತಿ ಇರುವಾಗ ಪಥಸಂಚಲನ ಸ್ಥಳದ ವೀಕ್ಷಣೆಗೆ ಬಂದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ಶೀಘ್ರದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವದಾಗಿ ತಿಳಿಸಿದರು. ರಟ್ಟಿಹಳ್ಳಿ ಪಟ್ಟಣದಲ್ಲಿ ಕಳೆದ 7ರಿಂದ ಆರ್‌ಎಸ್‌ಎಸ್ ಪ್ರಶಿಕ್ಷಾ ವರ್ಗ ನಡೆಯುತ್ತಿದ್ದು ಇದೇ 14 ರಂದು ಗಣವೇಷದಾರಿಗಳ ಪಥಸಂಚಲನ ನಡೆಯಲಿದೆ.

Edited By :
PublicNext

PublicNext

13/10/2022 08:50 pm

Cinque Terre

45.77 K

Cinque Terre

4

ಸಂಬಂಧಿತ ಸುದ್ದಿ