ಹಾವೇರಿ: ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕವಾಗಿರುವ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಆದೇಶದ ವಿರುದ್ಧ ಹಾವೇರಿಯಲ್ಲಿ ಪ್ರತಿಭಟನೆ ನಡೆಯಿತು. ಹಾವೇರಿ ಜಿಲ್ಲೆಯ ಸಮಾನ ಮನಸ್ಕ ಪ್ರವಾಸಿ ವಾಹನ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹುಕ್ಕೇರಿಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಡಿಸೇಲ್ ಬೆಲೆ ಏರಿಕೆ, ಟ್ಯಾಕ್ಸ್, ಇನ್ಸೂರೆನ್ಸ್ ದರ ಏರಿಕೆ ಸೇರಿದಂತೆ ಈಗಾಗಲೆ ಸರಕಾರ ಹಲವು ದರಗಳನ್ನು ಏರಿಕೆ ಮಾಡಿದ್ದರಿಂದ ಪ್ರವಾಸಿ ವಾಹನಗಳ ಮಾಲೀಕರು ಹೈರಾಣಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಪ್ರವಾಸಿ ವಾಹನಗಳ ಮಾಲೀಕರಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಈ ಕೂಡಲೇ ಸರಕಾರ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಸರಕಾರವನ್ನು ಒತ್ತಾಯಿಸಿದರು.
PublicNext
24/07/2024 07:44 am