", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1736408355-WhatsApp-Image-2025-01-09-at-1.09.06-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಬೆಂಗಳೂರಿನಲ್ಲಿ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಕೆಲ ಬಡಾವಣೆ ರಸ್ತೆಗಳಿಗೆ ಮುಸ್ಲಿಮರ ಹೆಸರು ನಾಮಕರಣ ಮಾಡುತ್ತಿರುವುದಕ್ಕೆ ಶ್ರೀರಾಮಸೇನ...Read more" } ", "keywords": "Haveri, Muslim Community, Road Naming, Sri Ram Sena, Promod Mutalik, Controversy, Karnataka News, Indian Politics, Community Development, Infrastructure Naming, Haveri Development.,Politics", "url": "https://publicnext.com/article/nid/Haveri/Politics" } ಹಾವೇರಿ: ಬಡಾವಣೆ ರಸ್ತೆಗಳಿಗೆ ಮುಸ್ಲಿಮರ ಹೆಸರು!- ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಕರಾರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಡಾವಣೆ ರಸ್ತೆಗಳಿಗೆ ಮುಸ್ಲಿಮರ ಹೆಸರು!- ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಕರಾರು

ಹಾವೇರಿ: ಬೆಂಗಳೂರಿನಲ್ಲಿ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಕೆಲ ಬಡಾವಣೆ ರಸ್ತೆಗಳಿಗೆ ಮುಸ್ಲಿಮರ ಹೆಸರು ನಾಮಕರಣ ಮಾಡುತ್ತಿರುವುದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಕೇವಲ ಬೆಂಗಳೂರು ಮಾತ್ರವಲ್ಲ, ಜಮೀರ್ ಅಹ್ಮದ್ ವಕ್ಫ್ ಸಚಿವನಾದ‌ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಬೆಂಗಳೂರಲ್ಲಿ 11ನೇ ವಾರ್ಡ್‌ನ 9 ರಸ್ತೆಗಳಿಗೆ 9 ಮುಸ್ಲಿಮ್ ಮುಖಂಡರ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ನಡೆದಿದೆ. ಈ ಕುರಿತಂತೆ ಬೆಂಗಳೂರು ಮೇಯರ್‌ಗೆ ಶ್ರೀರಾಮಸೇನೆಯಿಂದ ಮನವಿ ನೀಡಿದ್ದೇವೆ. ಈ ರೀತಿಯ ಹೆಸರುಗಳ ನಾಮಕರಣ ಮಾಡಬಾರದು ಅದನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.

ಹಿಂದೂಗಳಲ್ಲಿ ಜಾತಿ ಗಣತಿ ಮಾಡಿ, ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಅವುಗಳ ನಡುವೆ ಸಂಘರ್ಷ ಉಂಟು ಮಾಡುವ ಹುನ್ನಾರವಿದೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು. ಹಿಂದೂಗಳಲ್ಲಿ ಅಷ್ಟೇ ಅಲ್ಲ, ಮುಸ್ಲಿಮರಲ್ಲಿ ಸಹ ಜಾತಿ ಗಣತಿಯಾಗಲಿ. ಅವರಲ್ಲಿಯೂ 73 ಪಂಗಡಗಳಿವೆ. ಅವುಗಳ ಸರ್ವೆ ಮಾಡಿ ನೋಡೋಣ ಎಂದು ಮುತಾಲಿಕ್ ಸವಾಲು ಹಾಕಿದರು. ಕ್ರೈಸ್ತ ಧರ್ಮದಲ್ಲಿ ಸಹ ಪಂಗಡಗಳಿವೆ. ಕೇವಲ ಹಿಂದೂಗಳಲ್ಲಿ ವರ್ಗೀಕರಣ ಮಾಡಿ ಸಂಘರ್ಷ ಹುಟ್ಟುಹಾಕುತ್ತಿದ್ದೀರಾ? ಕ್ರೈಸ್ತ, ಮುಸ್ಲಿಂ ಧರ್ಮದ ಪಂಗಡಗಳನ್ನು ವಿಂಗಡಣೆ ಮಾಡಿ ನೋಡೋಣ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Edited By : Shivu K
PublicNext

PublicNext

09/01/2025 01:09 pm

Cinque Terre

36.41 K

Cinque Terre

1