ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಶಿಶುನಾಳಧೀಶನ ಸನ್ನಿಧಿಯಲ್ಲಿ ನಿರಾಮಯ ಯುವಕರ ಶ್ರಮದಾನ

ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವ ನಿರಾಮಯ ಪೌಂಡೇಶನ್ ಯುವಕರು ಗುಂಪು, ಈ ಬಾರಿ ಪೊರಕೆ ಹಿಡಿದು ನಿಂತು ತಮ್ಮ ಶ್ರಮದಾನದ ಮೂಲಕ ಸಂತ ಶಿಶುವಿನಹಾಳ ಶರೀಫರ ಮಠದ ವಾತಾವರಣ ಸ್ವಚ್ಛಗೊಳಿಸುವ ಕರ್ತವ್ಯ ಮಾಡಿದೆ‌.

ಹೌದು. ಕಳೆದ ಮಾ.13ರಂದು ನಡೆದ ಸಂತ ಶಿಶುವಿನಹಾಳ ಜಾತ್ರಾ ಮಹೋತ್ಸವದಲ್ಲಿ ನಾಡಿನಾದ್ಯಂತ ಭಕ್ತಾಧಿಗಳು ಪಾಲ್ಗೊಂಡು, ತೋಟದ ಜಾಗ, ಗದ್ದುಗೆಯ ಸುತ್ತಲಿನ ವಾತಾವರಣ ಪ್ಲಾಸ್ಟಿಕ್ ಇತರೆ ತ್ಯಾಜ್ಯ, ಕಸ, ಬಿದ್ದು ಅನೈರ್ಮಲ್ಯ ತಾಳಿತ್ತು. ಈ ವಿಷಯ ಗಮನಿಸಿದ ನಿರಾಮಯ ಪೌಂಡೇಶನ್ ಯುವಕರ ಬಳಗವು, ತಮ್ಮ ಒಂದು ದಿನವನ್ನು ಶ್ರಮದಾನಕ್ಕೆ ಮೀಸಲಿಟ್ಟು ಸ್ವಚ್ಛತೆ ಕಾರ್ಯ ಮಾಡಿ ಸಂತ ಶಿಶುವಿನಹಾಳ ಶರೀಫರ ಸಾನ್ನಿಧ್ಯವನ್ನು ಶುಭ್ರ ಗೊಳಿಸಿದೆ.

ಇದೇ ಕಾಯಕವನ್ನು ಬರುವ ಭಾನುವಾರವು ಸಹ ಸ್ವಯಂ ಪ್ರೇರಿತರಾಗಿ ಮಾಡುವ ವಿಶ್ವಾಸವನ್ನು ನಿರಾಮಯ ಯುವಕರು ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

28/03/2022 12:16 pm

Cinque Terre

97.28 K

Cinque Terre

0