ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಸಿಲಿಂಡರ್ ಸ್ಫೋಟ - ಓರ್ವನಿಗೆ ಗಾಯ

ಹಾವೇರಿ: ರಸ್ತೆ ಬದಿ ಇರುವ ಹೋಟೆಲ್‌ನಲ್ಲಿ ಅಡುಗೆ ಅನಿಲ್ ಸಿಲಿಂಡರ್ ಸ್ಫೋಟಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ನಡೆದಿದೆ.

ಕಂಚಿನೆಗಳೂರು ಗ್ರಾಮದ ಪ್ಲಾಟ್‌ನಲ್ಲಿರುವ ಬಸ್ ಸ್ಟಾಪ್ ಬಳಿ ಘಟನೆ ನಡೆದಿದ್ದು, ಹೋಟೆಲ್ ಮಾಲೀಕ ಹನುಮಂತ ಕರಡಿ ಗಾಯಗೊಂಡಿದ್ದಾರೆ. ಮುಂಜಾನೆ ಚಹಾ ಮಾಡಲು ಹೋದಾಗ ಸಿಲಿಂಡರ್ ಸ್ಫೋಟಗೊಂಡಿದೆ.

ಹನುಮಂತಪ್ಪಗೆ ಸುಟ್ಟಗಾಯಗಳಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

Edited By : Ashok M
PublicNext

PublicNext

25/07/2024 09:59 am

Cinque Terre

30.02 K

Cinque Terre

0

ಸಂಬಂಧಿತ ಸುದ್ದಿ