", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/340147_1736512703_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "9743515832" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ: ಬಸ್ ದರ ಏರಿಕೆ ಕೈಬಿಡಲು ಒತ್ತಾಯಿಸಿ ಜಿಲ್ಲಾ ಜನತಾದಳದ ವತಿಯಿಂದ ನಗರದ ಹೇಮಾವತಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಲಾಯಿತು. ನಗರದ ...Read more" } ", "keywords": "Node,Hassan,Public-News Hassan: Condemn bus fare hike, JDS protests,Public-News", "url": "https://publicnext.com/article/nid/Hassan/Public-News" } ಹಾಸನ: ಬಸ್ ದರ ಏರಿಕೆ ಖಂಡಿಸಿ, ಜೆಡಿಎಸ್ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಬಸ್ ದರ ಏರಿಕೆ ಖಂಡಿಸಿ, ಜೆಡಿಎಸ್ ಪ್ರತಿಭಟನೆ

ಹಾಸನ: ಬಸ್ ದರ ಏರಿಕೆ ಕೈಬಿಡಲು ಒತ್ತಾಯಿಸಿ ಜಿಲ್ಲಾ ಜನತಾದಳದ ವತಿಯಿಂದ ನಗರದ ಹೇಮಾವತಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಪ್ರತಿಭಟನಾಕಾರರು ಎನ್ ಆರ್ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ಎಚ್‌ಪಿ ಸ್ವರೂಪ್ ಮಾತನಾಡಿ, ಇತ್ತೀಚಿಗೆ ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣದರವನ್ನು ಏರಿಸಿ ಜನಸಾಮಾನ್ಯರಿಗೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇತ್ತೀಚಿಗೆ ಜನ ಇದರಿಂದ ತೊಂದರೆಗೊಳಗಾಗುತ್ತಿದ್ದು ದಿಢೀರ್ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ ಮಹಿಳೆಯರಿಗೆ ಉಚಿತವಾಗಿ ಸೌಲಭ್ಯ ನೀಡುವ ನೆಪದಲ್ಲಿ ಪುರುಷರ ಮೇಲೆ ಬರೆ ಎಳೆದಿದ್ದಾರೆ ಎಂದು ಆರೋಪಿಸಿದರು.

ವ್ಯಾಪಾರ ಉದ್ಯಮ ಆರ್ಥಿಕವಾಗಿ ಮುಂತಾದ ಕಾರಣಗಳಿಗೆ ನಿತ್ಯವೂ ಪ್ರಯಾಣ ಮಾಡಿ ಜೀವನ ಸಾಗಿಸುವವರ ಬದುಕು ಬೆಲೆ ಏರಿಕೆಯಿಂದ ಬಸವಳಿಯುವಂತಾಗಿದೆ. ಬಸ್ನಲ್ಲಿ ಪ್ರಯಾಣ ಮಾಡಿ ಬದುಕು ಸಾಗಿಸುತ್ತಿರುವವರಲ್ಲಿ ಪುರುಷರೇ ಹೆಚ್ಚಾಗಿದ್ದು ಒಂದು ಕಡೆ ದುಡಿಯುವ ವರ್ಗಕ್ಕೆ ಉತ್ತಮ ಕೂಲಿ ಕೊಡದೆ ಮತ್ತೊಂದಡೆ ರೈತಪಿ ವರ್ಗಗಳ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಡದೆ ಸಾಮಾನ್ಯವಾಗಿ ವರ್ಗವನ್ನು ಸಂಕಷ್ಟಕ್ಕೆ ಈಡು ಮಾಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪ್ರಯಾಣಿಕರಾದರ ಏರಿಸಿ ಮತ್ತೆ ಗಾಯದ ಮೇಲೆ ಬರೆ ಎಳೆಯುವಂತೆ ಆಗಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಎಸ್ ಲಿಂಗೇಶ್ ಮಾತನಾಡಿ, ಗ್ಯಾರೆಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಸಾಧ್ಯವಾಗದೆ ಈ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ ಗ್ಯಾರಂಟಿ ಯೋಜನೆಗಳನ್ನು ನಿಮ್ಮ ಪಕ್ಷದ ಆಡಳಿತಕ್ಕೆ ಬರುವ ಉದ್ದೇಶದಿಂದ ಮತ ಪಡೆಯುವ ಆಸೆಗೆ ಭರವಸೆ ನೀಡಿ ಈಗ ಇದರಿಂದಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಪ್ರಯಾಣಿಕರ ದರ ಏರಿಸುವುದು ಖಂಡನೀಯ ಎಂದರು.

ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ ಮಾತನಾಡಿ ಪ್ರಯಾಣಿಕ ದರ ಏರಿಸುವ ಮೂಲಕ ಜನ ಸಾಮಾನ್ಯರು ರೈತರು ಬಡ ಕಾರ್ಮಿಕರು ಮಧ್ಯಮ ವರ್ಗದವರು ಕೂಲಿ ಕಾರ್ಮಿಕರು ಮುಂತಾದವರಿಂದ ಹಣ ವಸೂಲಿ ಮಾಡಿ ಅವರ ಕುಟುಂಬವನ್ನು ಸಂಕಷ್ಟಕ್ಕೆ ಈರು ಮಾಡುತ್ತಿರುವುದು ಸರಕಾರದ ಆಗಲು ದರೋಡೆಯಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಬಸ್ ಸಂಚಾರ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು ಹೆಚ್ಚಿನ ಬಸ್ಸವ ಅವಲಭ್ಯ ಒದಗಿಸಲು ಗಮನ ನೀಡಿದ ಸರ್ಕಾರ ಜನಸಾಮಾನ್ಯರನ್ನು ನಿರ್ಲಕ್ಷದಿಂದ ನೋಡುತ್ತಿದೆ ಎಂದರು.

ಬಸ್ಸುಗಳು ತುಂಬಾ ಹಾಳಾಗಿದ್ದು ಇದನ್ನು ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಅಪಘಾತಗಳು ಕಾಣುತ್ತಿತ್ತು. ಈ ಬಗ್ಗೆ ಗಮನಹರಿಸಿ ವ್ಯವಸ್ಥೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಅದನ್ನು ಬಿಟ್ಟು ಜನಸಾಮಾನ್ಯರ ಪುರುಷರ ಮೇಲೆ ಪ್ರಯಾಣಿಕರ ದರ ಅಸ್ತ್ರ ಇರುವುದು ಖಂಡನೀಯ ಎಂದು ಆರೂಪಿಸಿದವರು ಕೂಡಲೇ ಬಸ್ದರ ಏರಿಕೆಯನ್ನು ಕೈ ಬಿಟ್ಟು ಯಥಾ ಸ್ಥಿತಿಯಲ್ಲಿ ಮುಂದುವರಿಸಿಕೊಳ್ಳಬೆಕು ಎಂದು ಮನವಿ ಮಾಡಿದರು.

Edited By : PublicNext Desk
PublicNext

PublicNext

10/01/2025 06:08 pm

Cinque Terre

29.5 K

Cinque Terre

0

ಸಂಬಂಧಿತ ಸುದ್ದಿ