ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ - ಪವಾಡ ಸದೃಶ ರೀತಿಯಲ್ಲಿ ದಂಪತಿ ಪಾರು

ಹಾಸನ: ರಸ್ತೆ ಬದಿ ಕಾರು ನಿಲ್ಲಿಸುತ್ತಿದ್ದಂತೆ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು ಪವಾಡ ಸದೃಶ ರೀತಿಯಲ್ಲಿ ದಂಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೇಲೂರು ತಾಲ್ಲೂಕು ಕಡೆಗರ್ಜೆ ಸಮೀಪ ನಡೆದಿದೆ.

ಚಿಕ್ಕಮಗಳೂರಿನಿಂದ ಡಾ.ಶೇಷಾದ್ರಿ ಹಾಗು ಅವರ ಪತ್ನಿ ಸುಬ್ರಹಣ್ಯಕ್ಕೆ ತೆರಳುತ್ತಿದ್ದರು. ಕಡೆಗರ್ಜೆ ಬಳಿ ರಸ್ತೆ ಬದಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಅವರು ವಾಹನ ನಿಲ್ಲಿಸಿ ಹೊರ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಯಾವ ಉದ್ದೇಶದಿಂದ ಕೆಳಗಿಳಿದರು ಎಂಬುದು ಗೊತ್ತಿಲ್ಲ. ಆದರೆ ಅದೇ ಕ್ಷಣಕ್ಕೆ ಬೆಂಕಿ ಹೊತ್ತಿಕೊಂಡು ಕಾರು ನೋಡ ನೋಡುತ್ತಿದ್ದಂತೆ ಭಸ್ಮವಾಗಿದ್ದು ಆಶ್ಚರ್ಯ ಮೂಡಿಸಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಆಕಸಿಕ ಘಟನೆಗೆ ದಂಪತಿ ಮೂಕ ಪ್ರೇಕ್ಷಕರಾಗಿದ್ದು ಸುಟ್ಟು ಭಸ್ಮವಾದ ಕಾರಿನ ಪರಿಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ಮತ್ತೊಂದೆಡೆ ಪ್ರಾಣ ಉಳಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Edited By : Somashekar
PublicNext

PublicNext

10/01/2025 01:03 pm

Cinque Terre

26.34 K

Cinque Terre

1

ಸಂಬಂಧಿತ ಸುದ್ದಿ