ಹಾಸನ: ನಗರದ ಎಸ್.ಡಿ.ಎಮ್ ಆಯುರ್ವೇದ ಕಾಲೇಜಿಗೆ ರೈತರೊಬ್ಬರು ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಗ್ರಾಮದ ಶಿವಪ್ರಸನ್ನ(72) ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರು 15 ವರ್ಷಗಳ ಹಿಂದೆ ತಮ್ಮ ಸಾವಿನ ನಂತರ ದೇಹದಾನಕ್ಕಾಗಿ ನೋಂದಾಯಿಸಿಕೊಂಡಿದ್ದರು. ಅದರಂತೆ ಕುಟುಂಬಸ್ಥರು ಶಿವಪ್ರಸನ್ನ ಅವರ ದೇಹವನ್ನು ಹಾಸನದ ಎಸ್ ಡಿ ಎಮ್ ಆಯುರ್ವೇದ ಕಾಲೇಜಿಗೆ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.ಶಿವಪ್ರಸನ್ನ ಅವರು ಮೂಲತಃ ಕೃಷಿಕರಾಗಿದ್ದು ಸಮಾಜ ಸೇವೆಯಲು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
Kshetra Samachara
04/02/2025 09:34 pm