", "articleSection": "Crime,Law and Order,Education", "image": { "@type": "ImageObject", "url": "https://prod.cdn.publicnext.com/s3fs-public/418299-1736444720-lancha.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ : ಲಂಚ ನೀಡಿದರೂ ದಲಿತನೆಂಬ ಕಾರಣಕ್ಕೆ ಅರಕಲಗೋಡಿನ ಖಾಸಗಿ ಶಾಲೆಗೆ ಪರವಾನಗಿ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಇಂದು ಡಿಡಿಪಿಐ ಕಚೇರಿಯಲ್ಲೇ...Read more" } ", "keywords": ",Hassan,Crime,Law-and-Order,Education", "url": "https://publicnext.com/article/nid/Hassan/Crime/Law-and-Order/Education" }
ಹಾಸನ : ಲಂಚ ನೀಡಿದರೂ ದಲಿತನೆಂಬ ಕಾರಣಕ್ಕೆ ಅರಕಲಗೋಡಿನ ಖಾಸಗಿ ಶಾಲೆಗೆ ಪರವಾನಗಿ ನೀಡಲು ನಿರಾಕರಣೆ ಹಿನ್ನೆಲೆಯಲ್ಲಿ ಇಂದು ಡಿಡಿಪಿಐ ಕಚೇರಿಯಲ್ಲೇ ಎಫ್‌ಡಿಎ ಅಧಿಕಾರಿಯನ್ನು ಖಾಸಗಿ ಶಾಲೆಯ ಮಾಲೀಕ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಡಿಡಿಪಿಐ ಕಚೇರಿ ಸಿಬ್ಬಂದಿ ಮಂಜುನಾಥ್ ಮೇಲೆ ಅರಕಲಗೂಡಿನ ನ್ಯಾಷನಲ್ ಹೆರೋಡೈಟ್ ಶಾಲೆಯ ಮಾಲೀಕ ತೀವ್ರ ವಾಗ್ದಾಳಿ ನಡೆಸಿದ್ದು, ಕಚೇರಿಯಲ್ಲಿ ರಂಪಾಟ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ತನ್ನಿಂದ 50,000 ಹಣ ಪಡೆಯುವ ಜೊತೆಗೆ ಮತ್ತೆ ಇದೀಗ ಈಗಾಗಲೇ 50 ಸಾವಿರ ರೂಪಾಯಿ ಚೆಕ್ ನೀಡಿದ್ದೇನೆ. ಆದರೂ ಪರವಾನಗಿ ನೀಡಲು ಮೂಲಭೂತ ಸೌಕರ್ಯಗಳ ಕೊರತೆ ನೆಪ ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದು ಶಾಲೆಯ ಮಾಲೀಕ ರಂಗಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಲಂಚ ಕೊಟ್ಟರೆ ಅಧಿಕಾರಿಯು ಪರವಾನಗಿ ನೀಡುತ್ತಿದ್ದಾರೆ. ನನ್ನನ್ನು ದಲಿತನೆಂಬ ಕಾರಣಕ್ಕೆ ಪರವಾನಗಿ ನೀಡಲು ವಿಳಂಬ ಮಾಡಿ ಸಂಸ್ಥೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ತನ್ನ ಮೇಲೆ ದೌರ್ಜನ ಮಾಡುತ್ತಿರುವ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
PublicNext
09/01/2025 11:15 pm