ನಗರದ ವಾರ್ಡ ನಂ6ರ ರಾಜೀವಗಾಂಧಿ ನಗರದಲ್ಲಿ ಇರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣ ಮತ್ತು ದುರಸ್ತಿ ಉಪವಿಭಾಗವು ಅಕ್ರಮ ಚಟುವಟಿಕೆ ತಾಣವಾಗಿದೆ. ಪಂಪ ಹೌನ್‌ನಲ್ಲಿ ಕುಡುಕರ ಅಡ್ಡೆ ಹಾಗೂ ಇತರ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಹಗಲು ರಾತ್ರಿ ಎನ್ನದೆ ಕಿಡಿಗೇಡಿಗಳು ಜೂಜು, ಮೋಜು ಮಸ್ತಿ ಮಾಡುವ ಅಡ್ಡೆಯಾಗಿ ನಿರ್ಮಾಣವಾಗಿದೆ. ಇನ್ನು ಕುಡಿದ ನಂತರ ಎಲೆಂದರಲ್ಲಿ ಬಾಟಲ್ ಹಾಗೂ ಪ್ಲಾಸ್ಟಿಕ್ ಎಸೆದು ಹೋಗುತ್ತಾರೆ. ಈ ವಿಷಯ ಸಂಬಂಧ ಯಾರಾದರು ಪ್ರಶ್ನೆ ಮಾಡಿದರೆ ಪೋಲಿ ಹುಡುಗರು ಗುಂಪುಕಟ್ಟಿಕೊಂಡು ಬಂದು ಪ್ರಶ್ನಿಸಿದ ವ್ಯಕ್ತಿಗಳಿಗೆ ಮನಬಂದಂತೆ ಥಳಿಸುತ್ತಾರೆ. ಈ ವಿಷಯ ಪೋಲಿಸ್ ಇಲಾಖೆಗೆ ಮಾಹಿತಿ ಇದ್ರು ಈ ಕಡೆ ಗಮನ ಹರಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ
PublicNext
06/10/2022 05:43 pm