ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಪಕ್ಷದ ಗಟ್ಟಿಧ್ವನಿ ಎನ್ನುವ ಕಾರಣಕ್ಕೆ ನನನ್ನು ಸ್ಪರ್ಧೆಗೆ ಇಳಿಸಿದ್ದಾರೆ : ಖರ್ಗೆ

ಕಲಬುರಗಿ : ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಗಾಂಧಿ ಕುಟುಂಬದಿಂದ ಯಾರು ಅಧ್ಯಕ್ಷ ಆಗೋಕೆ ತಯಾರಿಲ್ಲ, ಹೀಗಾಗಿ ಎಲ್ಲರ ಒತ್ತಡ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವುದಾಗಿ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷದ ಮೂಲಭೂತ ತತ್ವಗಳಿಗೆ ಗಟ್ಟಿಯಾದ ಧ್ವನಿ ಬೇಕಾಗಿದೆ. ಆ ಕೆಲಸ ನಾನು ಮಾಡಿದ್ದೇನೆ ಎಂಬ ನಂಬಿಕೆ ಇಟ್ಟು ಹಿರಿಯ ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಎಲ್ಲರೂ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ರು.ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ ಎಂದರು.

ಇದೆ ವೇಳೆ ಮಾತನಾಡಿದ ಅವರು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ದಿನಪಯೋಗಿ ವಸ್ತುಗಳು ಗಣನಕ್ಕೆ ಏರಿ ಕುಳಿತಿವೆ. ಬೆಲೆ ಏರಿಕೆ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಬಿಜೆಪಿಸರ್ಕಾರಕ್ಕೆ ಸಾಧ್ಯವಾಗ್ತಿಲ್ಲ, ನಾವು ಈ ಹಿಂದೆ ಬಡತನ ನಿರ್ಮೂಲನೆಗೆ ಹೋರಾಟ ಮಾಡಿದ್ದೇವೆ.ಸಂವಿಧಾನ ರಕ್ಷಣೆ ಮಾಡೋದು ನಮ್ಮೆಲ್ಲರ ಕರ್ತವ್ಯ ಇದೆ ಎಂದರು.

Edited By : Manjunath H D
PublicNext

PublicNext

04/10/2022 05:58 pm

Cinque Terre

27.51 K

Cinque Terre

2