ಶ್ರೀ ರಾಮನವಮಿ ಆಚರಿಸಿ ಬಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ತಾಲೂಕಿನ ಕಡಗಂಚಿಯಲ್ಲಿರೋ ಕೇಂದ್ರಿಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಈಗ ಘಟನೆ ನಡೆದಿದೆ.
ಈ ಘಟನೆಯಲ್ಲಿ ವಿದ್ಯಾರ್ಥಿಗಳಾದ ನರೇಂದ್ರ ಹಾಗೂ ವಿಶ್ವನಾಥ್ ಗೆ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್,ಸಾದಿಕ್ ಹಾಗೂ ರಾಹುಲ್ ಮೇಲೆ ಕೇಸ್ ದಾಖಲಾಗಿವೆ.
ನಿನ್ನೆ ವಿಶ್ವನಾಥ್ ಮತ್ತು ನರೇಂದ್ರ ಶ್ರೀ ರಾಮನವಮಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದ ವಿಶ್ವ ವಿದ್ಯಾಲಯಕ್ಕೂ ಆಗಮಿಸಿದ್ದರು. ಆಗಲೇ ಬೈಕ್ ಅಡ್ಡಗಟ್ಟಿ ವಿವಿ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದರು. ಈ ದೃಶ್ಯ ಸಾಮಾಜಿ ತಾಣದಲ್ಲೂ ವೈರಲ್ ಆಗಿದೆ.
ಈ ಸಂಬಂಧ ಕಲಬುರಗಿ SP ಇಷಾ ಪಂತ್ ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದೇವೆ. ಹಲ್ಲೆ ಮಾಡಿದವರಲ್ಲಿ ಕೆಲವರು ಹೊರ ರಾಜ್ಯದ ವಿದ್ಯಾರ್ಥಿಗಳೇ ಆಗಿದ್ದಾರೆ. ಹಲ್ಲೆಗೊಳಗಾದವರು ABVP ಕಾರ್ಯಕರ್ತರಿದ್ದಾರೆ. ಘಟನೆಗೆ ರಾಮನವಮಿ ಆಚರಣೆನೆ ಕಾರಣವೇ ಅನ್ನೋದು ಗೊತ್ತಾಗಿಲ್ಲ. ಆದರೆ ಇಲ್ಲಿವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ ಅಂತಲೇ ಇಷ್ಟಾ ಪಂತ್ ಹೇಳಿದ್ದಾರೆ.
PublicNext
11/04/2022 12:03 pm