ಕಲಬುರಗಿ : ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಟ್ಟಿರುವುದರಿಂದ ತಾಲೂಕಿನ ಮಣ್ಣೂರ ಗ್ರಾಮದಿಂದ ಬಾಬಾನಗರ ಭುಯ್ಯಾರ ಕುಡಗನೂರ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಕೊರಬುರ ಹಳ್ಳದ ಸೇತುವೆ ಮೇಲೆ ನೀರು ಬಂದಿರುವುದರಿಂದ ಮಣ್ಣೂರ, ಬಾಬಾನಗರ,ಭಯ್ಯಾರ,ಕುಡಗನೂರ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿರುವುದರಿಂದ ರಸ್ತೆ ಸಂಚಾರ ಬಂದ್ ಆಗಿದೆ.
ರಸ್ತೆ ಸಂಚಾರ ಕಡಿತಗೊಂಡಿದ ಕಾರಣ ಈ ಎಲ್ಲಾ ಗ್ರಾಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮಣ್ಣೂರ ಗ್ರಾಮದ ಶಾಲಾ,ಕಾಲೆಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಮುಖ ಗ್ರಾಮವಾದ ಮಣ್ಣೂರಿಗೆ ಬರುವ ರೈತರು,ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತುಂಬಾ ಅನಾನುಕೂಲವಾಗಿದೆ.
ಜಮಿನುಗಳಲ್ಲಿ ವಾಸ್ತವ್ಯವಿರುವ ಅನೇಕ ಕುಟುಂಬಗಳಿಗೆ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಅನಾರೋಗ್ಯದಿಂದ ಇರುವ ನಾಗರಿಕರಿಗೆ ಆಸ್ಪತ್ರೆಗಳಿಗೆ ತೆರಳಲು ತುಂಬಾ ತೋಂದರೆಯಾಗುತ್ತಿದೆ.
ಈ ಸೇತುವೆ ಮುಳುಗಡೆಯಾಗಿದ್ದರಿಂದ ಬದಲಿ ಮಾರ್ಗ ಬಳಸಿದರೆ ಸುಮಾರು 8 ರಿಂದ 10 ಕಿಮೀ ಸುತ್ತಿ ಗ್ರಾಮಕ್ಕೆ ಬರಬೆಕಾಗುತ್ತದೆ. ಆದರೆ ವಾಹನದ ವ್ಯವಸ್ಥೆ ಇರುವರು ದ್ವಿಚಕ್ರ ವಾಹನಗಳು ಇರುವರು ಬರಬಹುದು. ಕಾಲ್ನಡಿಗೆಯನ್ನೆ ನಂಬಿದ ಸಾರ್ವಜನಿಕರ ಪರಸ್ಥಿತಿ ಹೆಳತಿರದಾಗಿದೆ.
ಪ್ರತೀ ವರ್ಷವು ಪ್ರವಾಹದ ಸಂದರ್ಭದಲ್ಲಿ ಯು ಈ ಸೇತುವೆ ಮುಳುಗಡೆಯಾಗುತ್ತದೆ. ಪ್ರತೀಭಾರಿಯು ಗ್ರಾಮಸ್ಥರು,ವಿದ್ಯಾರ್ಥಿಗಳ,ವೃದ್ಧರ,ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರ ಗೋಳು ಕೆಳುವುರಿಲ್ಲ.
PublicNext
19/09/2022 09:41 pm