ಕಲಬುರಗಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಅದ್ಧೂರಿ ದುರ್ಗಾ ದೌಡ್ ಮೆರವಣಿಗೆ ನಡೆಯಿತು. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಭವ್ಯ ಮೆರವಣಿಗೆ ಮಹಿಳೆಯರು ಕೇಸರಿ ಪೇಟಾ ಧರಿಸಿ, ಕೈಯಲ್ಲಿ ಭಗವಾಧ್ವಜ ಹಿಡಿದ ಮಿಂಚಿದರು. ವಿಜಯದಶಮಿಯ ಪ್ರಯುಕ್ತ ನಡೆಸುವ ದುರ್ಗಾ ದೌಡ್ ಮೆರವಣಿಗೆ ರವಿವಾರ ಅದ್ದೂರಿ ಚಾಲನೆ ನೀಡಲಾಯಿತು. ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದ ವರೆಗೆ ನಡೆದ ಮೆರವಣಿಗೆಯಲ್ಲಿ 2000ಕ್ಕೂ ಅಧಿಕ ಮಹಿಳೆಯರು ಭಾಗಿ ಸಂಭ್ರಮಿಸಿದರು. ಇನ್ನು ಕೆಲ ಯುವತಿಯರು ಬೂಲೇಟ್ ಸವಾರಿ ಮಾಡಿ ಗಮನ ಸೆಳೆದರು. ಮೆರವಣಿಗೆಯುದ್ದಕೂ ಮಹಿಳೆಯರು ನಾರಿ ಶಕ್ತಿ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.
PublicNext
02/10/2022 10:22 pm