ಕಲಬುರಗಿ: ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ವೃದ್ದೆ ಮೃತಪಟ್ಟಿರುವ ಘಟನೆ ನಡೆದಿದೆ. ನಗರದ ಬಿದ್ದಾಪುರ ಕಾಲೋನಿ ನಿವಾಸಿಯಾದ ಪಾರ್ವತಿ ನಾಗೇಂದ್ರ ಬಿರಾದಾರ (60)ಎಂದು ತಿಳಿದು ಬಂದಿದೆ. ಸಂಗಮೇಶ್ವರ ಕಾಲೋನಿಯ ಮನೆಕೆಲಸಕ್ಕೆಂದು ಹೋಗಲು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು.
ಈ ಸಮಯದಲ್ಲಿ ಶಾಹಾಬಾದನಿಂದ ಕೆಂದ್ರ ಬಸ್ ನಿಲ್ದಾಣಕ್ಕೆ ಬಸ್ ಬಂದಿದ್ದು, ಬಸ್ ಚಾಲಕ ಬಲಭಾಗದಿಂದ ಎಡಕ್ಕೆ ವೇಗವಾಗಿ ತಿರುವು ತೆಗೆದುಕೊಂಡಿದ್ದು, ಈ ವೇಳೆ ಬಸ್ ಚಕ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾಳೆ. ಮಹಿಳೆಯ ವಿಳಾಸ ಮೊಬೈಲ್ ಮೂಲಕ ಪತ್ತೆಯಾಗಿದ್ದು, ಬಸ್ ಚಾಲಕನನ್ನು ಪೊಲಿಸರು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
Kshetra Samachara
09/10/2022 04:31 pm