ಕಲಬುರಗಿ : ತಡರಾತ್ರಿ ಮೆಡಿಕಲ್ ಶಾಪ್ ಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗಿಸಿರುವ ಘಟನೆ ನಗರದ ಗಂಜ್ ಪ್ರದೇಶದ ಸೇವಾಲಾಲ್ ಚೌಕ್ ಬಳಿ ನಡೆದಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಅವಿನಾಶ್ ಎಂಬುವರಿಗೆ ಸೇರಿದ ಮೆಡಿಕಲ್ ಶಾಪ್ ಇದಾಗಿದೆ. ದೈನಂದಿನಂತೆ ರಾತ್ರಿ ಮೆಡಿಕಲ್ ಶಾಪ್ ಮುಚ್ವಿಕೊಂಡು ಮನೆಗೆ ತೆರಳಿದಾಗ ತಡರಾತ್ರಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ದಟ್ಟವಾದ ಹೊಗೆ ಆವರಿಸಿ ಕೆಲಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು.
ಸ್ಥಳಕ್ಕೆ ಸಬ್ ಅರ್ಬನ್ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡಿದ್ದಾರೆ. ಈಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
05/10/2022 09:58 am