ಭಾರತೀಯ ಜನತಾ ಪಕ್ಷದಲ್ಲಿ ಜನಪರ ಕಾಳಜಿಯೊಂದಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿಯವರು ರಾಜ್ಯದ ಗೃಹ ಸಚಿವರಾಗಿ ಈಗ ಮತ್ತೇ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ನಮ್ಮ ಸವಣೂರು-ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಕೀರ್ತಿ ಪತಾಕೆಯನ್ನು ಹಿಡಿದುಕೊಂಡು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡು, ನಾಡಿನ ಹೊಸ ಸಾರಥಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು.
ನಿಮ್ಮ ಅಭಿವೃದ್ಧಿ ಪರ ನಿಲುವು ಹಾಗೂ ಪಕ್ಷ ಸಂಘಟನೆ ಬಗ್ಗೆ ನಿಮಗಿರುವ ಬದ್ಧತೆಗೆ ದೊರೆತ ಈ ಸ್ಥಾನವು ಮುಂದಿನ ದಿನಗಳಲ್ಲಿ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ನೀಡಲೆಂದು ಪ್ರಾರ್ಥಿಸುತ್ತೇವೆ. ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಉತ್ತರ ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದಿರುವ ನಿಮಗೆ ಮತ್ತೊಮ್ಮೆ ಅಭಿನಂದನೆ.
ಅಭಿನಂದನೆ ಸಲ್ಲಿಸುವವರು:
ಚಂದ್ರಶೇಖರ ಪುಟ್ಟಪ್ಪ ನಾಗಪ್ಪನವರ
ಜಿಲ್ಲಾ ಪಂಚಾಯತ ಆಕಾಂಕ್ಷಿಗಳು ಹಾಗೂ
ಬಿಜೆಪಿ ಯುವ ಮುಖಂಡರು ಹಾವೇರಿ ಜಿಲ್ಲೆ ಯಲವಿಗಿ
ಶಂಕ್ರವ್ವ ಚಂದ್ರಶೇಖರ ನಾಗಪ್ಪನವರ
ಗ್ರಾಮ ಪಂಚಾಯತಿ ಅಧ್ಯಕ್ಷರು ಯಲವಿಗಿ
ತಾ.ಸವಣೂರು ಜಿ.ಹಾವೇರಿ.
PublicNext
28/07/2021 03:24 pm