ಚಿತ್ರದುರ್ಗ : ಮಠದಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಬಂಧನವಾಗಿದೆ.
ಸದ್ಯ ಅವರು ಪೋಲಿಸ್ ವಶದಲ್ಲಿದ್ದು ಇತ್ತ ವೈದ್ಯಕೀಯ ಪರೀಕ್ಷೆ ನಡೆಯುತ್ತಿವೆ. ಇದೀಗ ಮುರುಘಾ ಮಠವನ್ನು ನಂಬಿ ಶೈಕ್ಷಣಿಕ ಪ್ರಗತಿಗಾಗಿ ಹಾಸ್ಟೆಲ್ ವಾಸವಿದ್ದ ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆ ಭೀತಿ ಉಂಟಾಗಿದೆ.
ಈಗಾಗಲೇ ಮುರುಘಾ ಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನಲೆ ಮಠದ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಕುರಿತು ಮಕ್ಕಳ ಹಕ್ಕು ಆಯೋಗ ಚಿಂತಿಸುತ್ತಿದೆ.
ಹಾಸ್ಟೆಲ್'ನಲ್ಲಿರುವ ವಿದ್ಯಾರ್ಥಿನಿಯರ ಮುಂದಿನ ವ್ಯಾಸಂಗಕ್ಕೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಒಟ್ಟು 125 ವಿದ್ಯಾರ್ಥಿನಿಯರು ಮಠದ ಹಾಸ್ಟೆಲ್'ನಲ್ಲಿ ವಸತಿ ಇದ್ದರು. ಅವರ ಪೈಕಿ ಸುಮಾರು ಜನ ವಿದ್ಯಾರ್ಥಿನಿಯರು ಹಬ್ಬದ ನಿಮಿತ್ತ ಊರಿಗೆ ಹೋಗಿದ್ದು, ಪ್ರಕರಣದ ಹಿನ್ನಲೆಯಲ್ಲಿ ಪುನಃ ಮಠಕ್ಕೆ ಮರಳಿಲ್ಲ.
ಹೀಗಾಗಿ ಅವರ ಆಗಮನದ ಬಳಿಕ ಎಲ್ಲಾ ವಿದ್ಯಾರ್ಥಿನಿಯರನ್ನು ಆಯಾ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಸ್ಟೆಲ್'ಗಳಿಗೆ ಶಿಫ್ಟ್ ಮಾಡಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.
PublicNext
03/09/2022 03:30 pm