ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ನಾಡ ಹಬ್ಬ ದಸರಾಗೆ ಸಕಲ ಸಿದ್ಧತೆ ಆರಂಭ, ಪ್ರಾಯೋಜಕತ್ವ ಸೆ.10 ಕೊನೆ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಸಿದ್ಧತಾ ಕಾರ್ಯ ಚುರುಕುಗೊಂಡಿದೆ.ಅದ್ದೂರಿಯಾಗಿ ದಸರಾ ಪ್ರಾಯೋಜಕತ್ವಕ್ಕಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಎಸ್ಪಿ ಆರ್.ಚೇತನ್ ನೇತೃತ್ವದಲ್ಲಿ ಸಭೆ ಮಾಡಲಾಗಿದೆ.

ನಾಡ ಹಬ್ಬ ದಸರಾ ಪೂರ್ವಭಾವಿಯಾಗಿ ನಡೆಸಿದ ಸಭೆಯಲ್ಲಿ ದಸಾರದ 18ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವಕ್ಕೆ ಕರೆ ನೀಡಲಾಗಿದೆ. ರಾಜ್ಯದ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಬ್ಯಾಂಕರ್ಸ್, ಹಾಗೂ ಡೆವಲಪರ್ಸ್'ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕನಿಷ್ಠ 2 ಲಕ್ಷದಿಂದ ತಮ್ಮ ಶಕ್ತಿ ಅನುಸಾರ ಪ್ರಾಯೋಜಕತ್ವ ಪಡೆಯಲು ಅವಕಾಶ‌ ನೀಡಲಾಗಿದೆ.

ಸೆ.10 ರೊಳಗೆ ಪ್ರಯೋಜಕತ್ವಕ್ಕೆ ನೊಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಪ್ರಾಯೋಜಕತ್ವ ಪಡೆಯುವವರು ದಸರಾ ವಿಶೇಷಾಧಿಕಾರಿ ಡಿಸಿ ಬಗಾದಿ ಗೌತಮ್ ಅವರ ಹೆಸರಿಗೆ ಡಿಡಿ ಅಥವಾ ಚೆಕ್ ನೀಡಲು ಸೂಚನೆ ನೀಡಲಾಗಿದೆ. ಸಭೆಯಲ್ಲಿ ಪ್ರಾಯೋಜಕತ್ವ ಕುರಿತು ಪರಸ್ಪರ ಚರ್ಚೆ ಕೂಡ ನಡೆಸಲಾಗುತ್ತದೆ.

Edited By : Manjunath H D
PublicNext

PublicNext

03/09/2022 03:28 pm

Cinque Terre

29.45 K

Cinque Terre

0