ನವದೆಹಲಿ: ಭಾರತದಲ್ಲಿ ಯಾವತ್ತೂ ಶ್ರೀಲಂಕಾ ಇಲ್ಲವೆ ಪಾಕಿಸ್ತಾನದಂತಹ ಸ್ಥಿತಿ ನಿರ್ಮಾಣ ಆಗೋದೇ ಇಲ್ಲ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ವಿದೇಶಿ ವಿನಿಮಯ ಸಂಗ್ರಹದಲ್ಲಿ ಆರ್‌ಬಿಐ ಅತ್ಯುತ್ತಮ ಕೆಲಸ ಮಾಡುತ್ತಿದೆ. ವಿದೇಶಿ ವಿನಿಮಯ ಭಾರತದಲ್ಲಿ ಚೆನ್ನಾಗಿಯೇ ಇದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ವಿದೇಶಿ ಸಾಲದ ವಿಚಾರಕ್ಕೆ ಬಂದ್ರೆ, ಭಾರತದ ವಿದೇಶಿ ಸಾಲದ ಪ್ರಮಾಣ ಕಡಿಮೆ ಇದೆ ಅಂತಲೂ ರಘುರಾಮ್ ರಾಜನ್ ವಿವರಿಸಿದ್ದಾರೆ.
PublicNext
31/07/2022 08:00 am