ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರಿಗಳ ನಿರ್ಲಕ್ಷ್ಯ : ಪೌರಕಾರ್ಮಿಕರಿಗೆ ಉಪವಾಸದ ಕೆಲಸ

ತುಮಕೂರು : ಈ ಹಿಂದೆ ಪಾಲಿಕೆಯಿಂದ ಟೆಂಡರ್ ಪಡೆದು ಕಾರ್ಮಿಕರಿಗೆ ತಿಂಡಿ ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರರ ಟೆಂಡರ್ ಜೂನ್ 30 ಕ್ಕೆ ಅಂತ್ಯಗೊಂಡಿದ್ದು ಬೇರೆಯವರಿಗೆ ಟೆಂಡರ್ ನೀಡುವ ಉದ್ದೇಶದಿಂದ ತಿಂಡಿ ಪೂರೈಕೆಯನ್ನು ಜುಲೈ 1ರಿಂದ ಸ್ಥಗಿತ ಮಾಡಲಾಗಿದೆ.

ಕಳೆದ 18 ದಿನಗಳಿಂದ ಪೌರಕಾರ್ಮಿಕರಿಗೆ ಸ್ವಚ್ಛತೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ತಿಂಡಿ ಸಿಗದೆ ಪೌರಕಾರ್ಮಿಕರು ಉಪವಾಸದಿಂದ ನರಳುತ್ತಲೇ ನಗರದ ಸ್ವಚ್ಛತೆ ಕಾರ್ಯ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೊಸದಾಗಿ ಟೆಂಡರ್ ಕರೆದು ಒಂದು ತಿಂಗಳು ಸನಿಹ ವಾಗುತ್ತಿದ್ದರೂ ಸಹ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ, ಅಧಿಕಾರಿಗಳು ಹೇಳುವ ಪ್ರಕಾರ ಈ ಹಿಂದೆ 20 ರೂ ವೆಚ್ಚದಲ್ಲಿ ತಿಂಡಿ ನೀಡಲಾಗುತ್ತಿತ್ತು, ಈಗ ಇದನ್ನು 35 ರೂಗಳಿಗೆ ಹೆಚ್ಚಿಸಿ ಗುಣಮಟ್ಟದ ಆಹಾರವನ್ನು ನೀಡುವ ಉದ್ದೇಶದಿಂದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಅದಕ್ಕಾಗಿ ತಿಂಡಿ ಪೂರೈಕೆ ನಿಂತಿದೆ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡುತ್ತಿದ್ದಾರೆ.

ಕಸದ ಆಟೋ ಚಾಲಕರಿಗೆ ಮಾತ್ರ ಬೆಳಗಿನ ಉಪಹಾರ ನೀಡುತ್ತಿದ್ದು, ಉಳಿದಂತೆ ಕಾಯಂ ಗುತ್ತಿಗೆ, ಹೊರಗುತ್ತಿಗೆ, ಕೆಲಸ ಮಾಡುತ್ತಿರುವ 470 ನೌಕರರಿಗೆ ತಿಂಡಿ ಇಲ್ಲದಂತಾಗಿದೆ. ಒಂದು ಮೂಲದ ಪ್ರಕಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಜುಲೈ 25ರಿಂದ ತಿಂಡಿ ವ್ಯವಸ್ಥೆ ಚಾಲನೆ ಗೊಳ್ಳುತ್ತದೆ ಎಂದು ಕೆಲವು ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಒಟ್ಟಾರೆ ನಗರಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ರೇಣುಕಾ, ಆರೋಗ್ಯಾಧಿಕಾರಿ ಮತ್ತು ಪರಿಸರ ಅಧಿಕಾರಿ ಕೃಷ್ಣಮೂರ್ತಿ ನಡುವೆ ತಾಳಮೇಳ ವಿಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು ಇನ್ನೊಂದೆಡೆ ಪಾಲಿಕೆಯ ಮೇಯರ್ ಪೌರ ಕಾರ್ಮಿಕರ ತಿಂಡಿ ಸಮಸ್ಯೆ ಮತ್ತು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಗಮನಹರಿಸದಿರುವುದು ಪಾಲಿಕೆಗೆ ಗ್ರಹಣ ಬಡಿದಂತಾಗಿದೆ. ಸಂಬಂಧಪಟ್ಟ ಪೌರಾಡಳಿತ ಸಚಿವರು, ಶಾಸಕರು ಮತ್ತು ಸಂಸದರು ಇತ್ತಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Edited By : Nirmala Aralikatti
PublicNext

PublicNext

19/07/2022 01:37 pm

Cinque Terre

17.2 K

Cinque Terre

0

ಸಂಬಂಧಿತ ಸುದ್ದಿ