ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ. ಬಿ.ಎಸ್‌.ಪಾಟೀಲ

ಬೆಂಗಳೂರು: ರಾಜ್ಯದ ನೂತನ ಲೋಕಾಯುಕ್ತರಾಗಿ ಹಾಲಿ ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಇಂದು (ಬುಧವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ನೂತನ ಲೋಕಾಯುಕ್ತರಿಗೆ ಪ್ರಮಾಣವಚನ ಬೋಧಿಸಿದರು. ನ್ಯಾ. ಬಿ.ಎಸ್‌. ಪಾಟೀಲ ಅವರು ಭಗವಂತ, ಸತ್ಯ ಮತ್ತು ನಿಷ್ಠೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೂಗುಚ್ಛ ನೀಡಿ ನೂತನ ಲೋಕಾಯುಕ್ತರನ್ನು ಅಭಿನಂದಿಸಿದರು.

ವಸತಿ ಸಚಿವ ವಿ ಸೋಮಣ್ಣ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಪಿ. ರಾಜೀವ್‌, ಕೆ. ಜೆ. ಜಾರ್ಜ್‌, ಎಂ. ಬಿ. ಪಾಟೀಲ, ಈಶ್ವರ್ ಖಂಡ್ರೆ, ಮಾಜಿ ಲೋಕಾಯುಕ್ತರಾದ ಎನ್.‌ ಸಂತೋಷ್‌ ಹೆಗ್ಡೆ, ಪಿ. ವಿಶ್ವನಾಥ್‌ ಶೆಟ್ಟಿ, ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳು, ನ್ಯಾಯಾಂಗ ಇಲಾಖೆ ಅಧಿಕಾರಿಗಳು, ವಕೀಲರು ಮತ್ತು ನೂತನ ಲೋಕಾಯುಕ್ತರ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ 2022ರ ಜನವರಿ 27ರಂದು ನಿವೃತ್ತರಾಗಿದ್ದರು. ಅಂದಿನಿಂದ ಈ ಹುದ್ದೆ ಖಾಲಿ ಇತ್ತು.

Edited By : Vijay Kumar
PublicNext

PublicNext

15/06/2022 02:42 pm

Cinque Terre

34.65 K

Cinque Terre

0