ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾವಿಗೆ ಒಣಹಾಕಿದ್ದ ಮಹಿಳೆ ಮರು ಕೆಲಸಕ್ಕೆ ಹಾಜರಾಗುವಂತೆ ಡಿಸಿ ಆದೇಶ

ಬೆಳಗಾವಿ: ಸುವರ್ಣಸೌಧ ಮುಂಭಾಗದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.ಸದ್ಯ ಆ ದಿನಗೂಲಿ ಕಾರ್ಮಿಕ ಮಹಿಳೆಗೆ ತಕ್ಷಣದಿಂದಲೇ ಕೆಲಸಕ್ಕೆ ಹಾಜರಾಗಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾವಿಗೆ ಒಣಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಹಣೆ ಒದಗಿಸಿಕೊಂಡಿದ್ದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು.

ಗುತ್ತಿಗೆದಾರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಲ್ಲಮ್ಮ ಸುವರ್ಣಸೌಧದಲ್ಲಿ ಶಾವಿಗೆ ಒಣಹಾಕಿದ್ದರು. ಆದರೆ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿರಲಿಲ್ಲ, ಬೇರೆ ಸ್ಥಳಕ್ಕೆ ಕೆಲಸ ಮಾಡಲು ನಿಯೋಜಿಸಲಾಗಿತ್ತಷ್ಟೇ ಎಂದರು.

ಇದಲ್ಲದೇ ನಾನು ಕೂಡ ಸುವರ್ಣಸೌಧಕ್ಕೆ ಭೇಟಿ ನೀಡಿ ಸಂಬಳ ಕಟ್ ಮಾಡಬಾರದು. ಯಾರನ್ನು ಕೆಲಸದಿಂದ ತೆಗೆದುಹಾಕಬಾರದು ಅಂತಾ ಹೇಳಿದ್ದೆ. ಇನ್ನೂ ಬೇರೆ ಸ್ಥಳಕ್ಕೆ ಕೆಲಸ ಮಾಡಲು ಮಲ್ಲಮ್ಮಗೆ ತಿಳಿಸಲಾಗಿತ್ತು. ಆದರೆ ಬೇರೆ ಸ್ಥಳದಲ್ಲಿ ಕೆಲಸ ಮಾಡೋದಕ್ಕೆ ಮಹಿಳೆಗೆ ದೂರ ಆಗುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತೆ ಅಂತಾ ಕೆಲ ಮಾಧ್ಯಮದವರು ಗಮನಕ್ಕೆ ತಂದರು. ಹೀಗಾಗಿ ತಕ್ಷಣದಿಂದಲೇ ಸುವರ್ಣ ಸೌಧದಲ್ಲಿ ಕೆಲಸ ಮಾಡಲು ನಿರ್ದೇಶನ ನೀಡಲಾಗಿದೆ. ಇಂದು ಅಥವಾ ನಾಳೆ ಕೆಲಸಕ್ಕೆ ಹಾಜರಾಗಬಹುದು. ಅವರಿಗೆ ಯಾವುದೇ ಸಂಬಳ ಕಟ್ ಮಾಡುವುದಿಲ್ಲ ಎಂದರು.

Edited By : Nirmala Aralikatti
PublicNext

PublicNext

03/06/2022 10:35 pm

Cinque Terre

81.53 K

Cinque Terre

6

ಸಂಬಂಧಿತ ಸುದ್ದಿ