ಬಳ್ಳಾರಿ: ಚಲಿಸುವ ರೈಲಿಗೆ ಬೀಳುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಿ ಜೀವ ಕಾಪಾಡಿದ ರೈಲ್ವೇ ಕಾನ್ಸ್ಟೇಬಲ್ ಎಸ್.ರಫೀ ಅವರಿಗೆ 'ಜೀವನ್ ರಕ್ಷ' ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ. ವಿಶೇಷವೆಂದರೆ ಈ ಪ್ರಶಸ್ತಿಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ರಫೀ ಆಗಿದ್ದಾರೆ.
2019ರಲ್ಲಿ ಬಳ್ಳಾರಿಯ ರೈಲ್ವೇ ನಿಲ್ದಾಣದಲ್ಲಿ ಚಲಿಸುವ ರೈಲು ಹತ್ತುವ ಸಮಯದಲ್ಲಿ ಪ್ರಯಾಣಿಕರೊಬ್ಬರು ಜಾರಿ ಬಿದ್ದಿದ್ದರು. ಈ ವೇಳೆ ರಫೀ ಅವರು ಸಮಯ ಪ್ರಜ್ಞೆಯಿಂದ ಪ್ರಯಾಣಿಕನ ರಕ್ಷಣೆ ಮಾಡಿದ್ದರು. ಘಟನೆಯ ಸಂಪೂರ್ಣ ಸನ್ನಿವೇಶ ನಿಲ್ದಾಣದ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಇವರು ಬಳ್ಳಾರಿ ನಗರದ ಕೇಂದ್ರ ರೈಲ್ವೇ ರಕ್ಷಣದಳದ ಕಾನ್ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಜೊತೆಗೆ ಪ್ರಮಾಣ ಪತ್ರ, ಮೆಡಲ್ ಹಾಗೂ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.
PublicNext
31/05/2022 04:06 pm