ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಮುಗಿತಾನೇ ಇಲ್ಲ. ಇದು ದಿನೇ ದಿನೇ ತಾರಕಕ್ಕೇರುತ್ತಲೇ ಇದೆ. ನಾಡಗೀತೆಗೆ ಅವಮಾನಿಸಿದ ಪಠ್ಯ ಪರಿಷ್ಕರಣೆ ಸಮಿತಿಯ ರೋಹಿತ್ ಚಕ್ರತೀರ್ಥ ವಿರುದ್ಧ ಈಗ ಸಾಹಿತಿಗಳೂ ಸಿಟ್ಟಾರಿದ್ದು ಆ ಸಾಲಿಗೆ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷಸ್ಥಾನಕ್ಕೆ ನಾಡೋಜ ಹಂಪನಾ ರಾಜೀನಾಮೆ ನೀಡೋ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ನಾಡಗೀತೆಯನ್ನ ತಿರುಚಿ ಕುವೆಂಪುಗೆ ಅವಮಾನ ಮಾಡಿರೋ ರೋಹಿತ್ ಚಕ್ರತೀರ್ಥರನ್ನ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನಾಗಿಸಿದ್ದಕ್ಕೆ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿದೆ. ನಿರ್ಮಲಾನಂದ ಸ್ವಾಮೀಜಿಗಳು ಕೂಡ ಚಕ್ರತೀರ್ಥರನ್ನ ವಜಾಗೊಳಿಸುವಂತೆ ಸಿಎಂಗೆ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿನ್ನೆ ಸಿಎಂ ಮಹತ್ವದ ಸಭೆಯನ್ನೂ ಮಾಡಿದ್ದಾರೆ. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಿಯೇ ಇಲ್ಲ. ಸರ್ಕಾರ ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ. ಹಿನ್ನೆಲೆಯಲ್ಲಿಯೇ ನಾಡೋಜ ಹಂಪನಾ ಅವ್ರು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
PublicNext
30/05/2022 04:26 pm