ನವದೆಹಲಿ: ಕೇಂದ್ರ ಸರ್ಕಾರಕ್ಕೆ 30,307 ಕೋಟಿ ಹಣವನ್ನ ಹೆಚ್ಚುವರಿಯಾಗಿ ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಂಡಳಿ ಈಗ ಅನುಮೋದನೆ ನೀಡಿದೆ.
ಹೌದು. ಸದ್ಯದ ಸ್ಥಿತಿಯಲ್ಲಿ ಕೇಂದ್ರ ಸರ್ಕಾರಕ್ಕೆ ದುಡ್ಡಿ ಅವಶ್ಯಕತೆ ಇದೆ ಅನ್ನೋದನ್ನ ಆರ್‌ಬಿಐ ಮಂಡಳಿ ಅರ್ಥ ಮಾಡಿಕೊಂಡಿದ್ದು, ಪ್ರಸ್ತುತ ಆರ್ಥಿಕ ಪರಿಸ್ಥಿತಿ,ಜಾಗತಿಕ ಮತ್ತು ದೇಶಿಯ ಸವಾಲುಗಳು,ಭೌಗೋಳಿಕ ರಾಜಕೀಯ ಬೆಳವಣಿಗೆಯ ಪ್ರಭಾವವನ್ನ ಆರ್‌ಬಿಐ ಮಂಡಳಿ ಪರಿಶೀಲನೆ ಮಾಡಿದೆ.
ಈ ಕಾರಣಕ್ಕೇನೆ 2021-22 ಸಾಲಿನ ಲೆಕ್ಕದಂತೆ 30,307 ಕೋಟಿ ಹಣವನ್ನ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿಯೇ ವರ್ಗಾಯಿಸಲು ನಿರ್ಧರಿಸಿದೆ.'
PublicNext
21/05/2022 09:27 am