ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಂಠಪೂರ್ತಿ ಕುಡಿದು ತಹಶೀಲ್ದಾರ ಕಚೇರಿ ಮುಂದೆ ರಂಪಾಟ ಮಾಡಿದ ಗ್ರಾಮ ಲೆಕ್ಕಾಧಿಕಾರಿ !

ಬೆಳಗಾವಿ: ಗ್ರಾಮ ಲೆಕ್ಕಾಧಿಕಾರಿಯೊಬ್ಬ ಡ್ಯೂಟಿ ವೇಳೆಯಲ್ಲಿ ಗ್ರಾಮವನ್ನು ನಿರ್ವಹಣೆ ಮಾಡುವುದನ್ನು ಬಿಟ್ಟು, ಕಂಠಪೂರ್ತಿ ಕುಡಿದು ತಹಶೀಲ್ದಾರ ಕಚೇರಿ ಮುಂದೆ ರಂಪಾಟ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ತಹಶೀಲ್ದಾರ್ ಕಚೇರಿ ಮುಂದೆ ನಡೆದಿದೆ.

ಸಂಜು ಬೆಣ್ಣಿ ಸವದತ್ತಿ ತಾಲೂಕಿನ ಗ್ರಾಮಲೆಕ್ಕಾಧಿಕಾರಿ. ಡ್ಯೂಟಿ ಮಾಡುವ ವೇಳೆಯಲ್ಲಿ ಕುಡಿದು ರಸ್ತೆಯಲ್ಲಿ ಬಿದ್ದು ದುರ್ವವರ್ತನೆ ತೋರಿದ್ದಾನೆ. ಗ್ರಾಮಲೆಕ್ಕಾಧಿಕಾರಿಯ ಈ ವರ್ತನೆ ಕಂಡರು ಕೂಡ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಸುಮ್ಮನೆ ಕುಳಿತಿದ್ದಾರೆ.

ಹಲವಾರು ಬಾರಿ ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ದುರ್ವವರ್ತನೆ ಕಂಡು ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಜನರು ಈ ಬಗ್ಗೆ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿ ಸಂಜು ಬೆಣ್ಣಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

Edited By : Manjunath H D
PublicNext

PublicNext

11/05/2022 04:27 pm

Cinque Terre

41.03 K

Cinque Terre

3