ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕಗೊಂಡಿದ್ದಾರೆ.
ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ ಇವರು 1982ರ ಡಿಸೆಂಬರ್ ನಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಗೆ ಸೇರ್ಪಡೆಗೊಂಡರು. ಇದರೊಂದಿಗೆ, ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಇಂಜಿನಿಯರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
ಜನರಲ್ ಎಂ.ಎಂ.ನರವಣೆ ಅವರು ಮೂರೂ ಸೇನಾಪಡೆಗಳ ಸಿಬ್ಬಂದಿ ಸಮಿತಿಯ ಮುಖ್ಯಸ್ಥರಾಗಿ (ಸಿಒಎಸ್ ಸಿ) ಡಿಸೆಂಬರ್ನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದರು. ಹೀಗಾಗಿ ಸೇನಾ ಮುಖ್ಯಸ್ಥರಾಗಿ ಮನೋಜ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ.
ಈಗಿರುವ ಜನರಲ್ ಮನೋಜ್ ಮುಕುಂದ್ ನರವಾನೆಯವರ 28 ತಿಂಗಳ ಅಧಿಕಾರ ಅವಧಿ ಏಪ್ರಿಲ್ 30ಕ್ಕೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮನೋಜ್ ಪಾಂಡೆಯವರನ್ನ ನೇಮಕಮಾಡಲಾಗಿದೆ. ಇವರು ಭಾರತೀಯ ಸೇನೆಯ 29ನೇ ಮುಖ್ಯಸ್ಥರಾಗಿದ್ದಾರೆ.
ಮನೋಜ್ ಪಾಂಡೆ ತಮ್ಮ 39 ವರ್ಷಗಳ ಸೇನಾ ವೃತ್ತಿಯಲ್ಲಿ ಪಶ್ಚಿಮದ ಗಡಿಯ ಇಂಜಿನಿಯರ್ ಬ್ರಿಗೇಡ್, ಎಲ್ಒಸಿ ಬಳಿ ಪದಾತಿ ದಳ, ಲಡಾಖ್ ವಲಯದಲ್ಲಿ ಪರ್ವತ ವಿಭಾಗದ ದಳ ಮತ್ತು ಈಶಾನ್ಯದ ಗಡಿಯಲ್ಲೂ ಒಂದು ಕಾರ್ಪ್ಸ್ ನ್ನು ಮುನ್ನಡೆಸಿದ್ದಾರೆ.
PublicNext
18/04/2022 07:03 pm