ತಮಿಳುನಾಡು: ಇಲ್ಲಿಯ ಕೊಯಮತ್ತೂರು ಜಿಲ್ಲೆಯ ಪಲ್ಲಾಚೆ ಪುರಸಭೆಗೆ 100 ವರ್ಷದ ಇತಿಹಾಸ ಇದೆ. ಆದರೆ, ಈಗ ಈ ಪುರಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಚಾಲಕಿಯ ನೇಮ ಮಾಡಿಕೊಂಡು ಹೊಸ ಇತಿಹಾಸವೇ ಬರೆಯಲಾಗಿದೆ.
ಹೌದು. ಈ ಮಹಿಳೆಯ ಹೆಸರು ಶಾಂತಿ. ಈ ಶಾಂತಿ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಒಬ್ಬ ಮಗನೂ ಇದ್ದಾನೆ. ಆದರೆ, ಪತಿ ಮೃತಪಟ್ಟಿರೋದು ದುರಂತ. ಈಗ ಈ ಚಾಲನಾ ವೃತ್ತಿಯಿಂದಲೇ ಈ ಮಹಿಳೆ ಮಕ್ಕಳನ್ನ ನೋಡಿಕೊಳ್ತಿದ್ದಾರೆ.
ಇಷ್ಟಪಟ್ಟು ಶಾಂತಿ ವಾಹನ ಚಾಲನೆ ಕಲಿತಿದ್ದಾರೆ. ಲೈಸೆನ್ಸ್ ಕೂಡ ಪಡೆದುಕೊಂಡಿದ್ದಾರೆ. ಈ ವಿಷಯ ಪುರಸಭೆಯ ಅಧ್ಯಕ್ಷೆ ಶ್ಯಾಮಲಾ ನವನೀತ್ ಕೃಷ್ಣನ್ ಅವರಿಗೆ ತಿಳಿದಿದೆ.
ಬಳಿಕ ಪುರಸಭೆಯ ಟಾಟಾ ಏಸ್ ವಾಹನ ಚಾಲನೆಗೆ ಅವಕಾಶ ಮಾಡಿಕೊಂಡಿದ್ದಾರೆ. ಅಲ್ಲಿಗೆ ಶಾಂತಿ ಪುರಸಭೆಗೆ ಚಾಲಕಿಯಾಗಿ ನೇಮಕ ಗೊಂಡ ಮೊದಲ ಚಾಲಕಿ ಎಂದ ಹೆಮ್ಮೆಗೂ ಪಾತ್ರರಾಗಿದ್ದಾರೆ.
PublicNext
18/04/2022 11:47 am