ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂದು 102ನೇ ಘಟಿಕೋತ್ಸವ ನಡೆಯಿತು. ಈ ವೇಳೆ ಹಲವು ವಿದ್ಯಾರ್ಥಿಗಳು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ 14 ಚಿನ್ನದ ಪದಕ ಪಡೆದ ಮಹದೇವಸ್ವಾಮಿ ಎಂಬ ವಿದ್ಯಾರ್ಥಿ ಕಥೆಯೇ ರೋಚಕ. ಹೌದು ಗಾರೆ ಕೆಲಸ ಮಾಡಿಕೊಂಡು ಓದಿರುವ ಮಹದೇವಸ್ವಾಮಿ ಚಾಮರಾಜನಗರ ಜಿಲ್ಲೆಯ ನಾಗವಳ್ಳಿ ಗ್ರಾಮದವರು. ಕನ್ನಡ ಸ್ನಾತಕೋತ್ತರ ಪದವಿಯಲ್ಲಿ 14 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನವನ್ನು ಪಡೆದು ಮುಂದೆ ಐಎಎಸ್ ಹಾಗೂ ಕೆಎಎಸ್ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ.
ಅದೇ ರೀತಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ತೇಜಸ್ವಿನಿ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಓದಿ, ಬಿಎ ಪದವಿಯಲ್ಲಿ 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನವನ್ನು ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ಈಕೆ ಛಲ ಬಿಡದೇ ಓದಿ ಮುಂದೆ ಬಂದಿದ್ದಾಳೆ.
ಒಟ್ಟಿನಲ್ಲಿ ಅದು ಇಲ್ಲ, ಇದು ಇಲ್ಲ ಎನ್ನುವವರ ಮಧ್ಯೆ ಈ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಮಾದರಿ.
PublicNext
22/03/2022 10:28 pm