ನವದೆಹಲಿ: ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಉದ್ಯೋಗಿ ಪ್ರಫುಲ್ ಸಿಂಗ್ ಅವರು ಕಡಿಮೆ ಸಮಯದಲ್ಲಿ ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ವೇಗವಾಗಿ ಪ್ರಯಾಣಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
ಪ್ರಫುಲ್ ಸಿಂಗ್ ಅವರು 16 ಗಂಟೆ 2 ನಿಮಿಷ 17 ಸೆಕೆಂಡುಗಳಲ್ಲಿ 254 ನಿಲ್ದಾಣಗಳಿಗೆ ಪ್ರಯಾಣಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ನಾನು ಬಹಳ ಸಮಯದಿಂದ ದೆಹಲಿ ಮೆಟ್ರೋವನ್ನು ಬಳಸುತ್ತಿದ್ದೇನೆ. ಹಾಗಾಗಿ ಎಲ್ಲಾ ಮಾರ್ಗಗಳ ಬಗ್ಗೆ ನನಗೆ ತುಂಬಾ ತಿಳಿದಿದೆ" ಎಂದು ಹೇಳಿದ್ದಾರೆ.
PublicNext
16/03/2022 07:38 pm