ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಬೊಕ್ಕಸಕ್ಕೆ ಕನ್ನ:ಸಿಎಂ ಬೊಮ್ಮಾಯಿ ಅವರೇ ನೀವು ನೋಡಲೇಬೇಕಾದ ಸ್ಟೋರಿ

ವರದಿ - ಗಣೇಶ್ ಹೆಗಡೆ

ಬೆಂಗಳೂರು- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರೇ ನೀವು ನೋಡಲೇಬೇಕಾದ ಸ್ಟೋರಿ ಇದು.

ಎಸ್. ಕೋವಿಡ್‌ ನಿಂದ ಸಾಕಷ್ಟು ಲಾಸ್, ಲಾಸ್ ಅಂತಿರೋ ಬಿಎಂಆರ್‌ಸಿಎಲ್ ಹಗಲು ದರೋಡೆ ಒಮ್ಮೆ ನೋಡಿ.ಸರ್ಕಾರಿ ನಿಯಮ ಉಲ್ಲಂಘನೆ‌ ಮಾಡಿ ಸರ್ಕಾರದ ಬೊಕ್ಕಸ ಖಾಲಿ ಮಾಡ್ತಿದ್ದಾರೆ ನಮ್ಮ ಮೆಟ್ರೋ ಅಧಿಕಾರಿಗಳು.

ಹೌದು. ಸರ್ಕಾರಿ ಅಧಿಕಾರಿಗಳಿಗೆ ಆರು ತಿಂಗಳಿಗೊಮ್ಮೆ ಡಿಎ ಹೆಚ್ಚಾಗುತ್ತೆ.ವರ್ಷ ಅಥವಾ ಎರಡು ವರ್ಷಗಳಿಗೆ ಒಮ್ಮೆ ಸಂಬಳ ಹೆಚ್ಚಳವಾಗುತ್ತೆ. ಆದರೆ ಕಳೆದ ಒಂದೇ ವರ್ಷದಲ್ಲಿ ಐದೈದು ಬಾರಿ ವೇತನ‌‌ ಏರಿಕೆ ಆಗಿದೆ.

ಮಾರ್ಚ್ 2020 ರಿಂದ ಏಪ್ರಿಲ್ 2021 ರವರೆಗೆ ಮುಖ್ಯ ಹಣಕಾಸು ಅಧಿಕಾರಿ‌ ಸೇರಿದಂತೆ ನೂರಕ್ಕೂ ಹೆಚ್ಚು ಅಧಿಕಾರಿಗಳಿಗೆ ವೇತನ ಸರಾಸರಿ 1 ಲಕ್ಷದ 24 ಸಾವಿರ ರೂ ಹೆಚ್ಚಳ ಮಾಡಲಾಗಿದೆ.ಉನ್ನತ ಹುದ್ದೆಯಲ್ಲಿ‌ ಇರುವ ಎಲ್ಲರ ವೇತನವೂ ಏರಿಕೆ‌ ಆಗಿದೆ.‌ಅದರ ಅಂಕಿ ಅಂಶಗಳ ಕೆಳಗಿನಂತಿವೆ.

ಯಾವ್ಯಾವ ಸಮಯದಲ್ಲಿ ವೇತನ ಎಷ್ಟೆಷ್ಟು ಹೆಚ್ಚಳ

ಮಾರ್ಚ್-2020 1,90,300

ಮೇ-2020 2,36,250

ಸೆಪ್ಟೆಂಬರ್- 2020 2,76,250

ಡಿಸೆಂಬರ್ 2020 2,92,150

ಏಪ್ರಿಲ್ 2020 3,06,200

ಹಿಂಗಿದೆ ಲೆಕ್ಕ, ಲಾಸ್ ಪ್ರಶ್ನೆ ಬರೋದೇ ಇಲ್ಲ ಅಲ್ವೇ ?

Edited By :
PublicNext

PublicNext

22/01/2022 04:43 pm

Cinque Terre

28.77 K

Cinque Terre

0

ಸಂಬಂಧಿತ ಸುದ್ದಿ