ನವದೆಹಲಿ : ಇನ್ಮುಂದೆ 8 ಜನ ಪ್ರಯಾಣಿಕರು ಪ್ರಯಾಣಿಸುವ ಮೋಟಾರು ವಾಹನಗಳಲ್ಲಿ ಕನಿಷ್ಠ 6 ಏರ್ ಬ್ಯಾಗ್ ಗಳನ್ನ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಪ್ರಯಾಣಿಕರ ಸುರಕ್ಷತೆ ಹಿನ್ನೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕನಿಷ್ಠ ‘6 ಏರ್ ಬ್ಯಾಗ್ʼಗಳನ್ನ ಕಡ್ಡಾಯಗೊಳಿಸಲು ಜಿಎಸ್ ಆರ್ (ಸಾಮಾನ್ಯ ಶಾಸನಬದ್ಧ ನಿಯಮಗಳು) ಕರಡು ಅಧಿಸೂಚನೆಗೆ ಸರ್ಕಾರ ಅನುಮೋದನೆ ನೀಡಿದೆ' ಎಂದು ಅವರು ಶುಕ್ರವಾರ ಹೇಳಿದ್ದಾರೆ. ಇನ್ನು 'ಇದು ಅಂತಿಮವಾಗಿ ವಾಹನದ ವೆಚ್ಚ ಅಥವಾ ರೂಪಾಂತರವನ್ನ ಲೆಕ್ಕಿಸದೆ ಎಲ್ಲಾ ವಿಭಾಗಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನ ಖಚಿತಪಡಿಸುತ್ತದೆ' ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಮೋಟಾರು ವಾಹನಗಳನ್ನು ಹಿಂದೆಂದಿಗಿಂತಲೂ ಸುರಕ್ಷಿತವಾಗಿಸಲು ಇದು ನಿರ್ಣಾಯಕ ಹೆಜ್ಜೆಯಾಗಿದೆ' ಎಂದು ಸಚಿವರು ಹೇಳಿದರು. ದೇಶದ ರಸ್ತೆ ಅಪಘಾತಗಳ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿಯ ಪ್ರಕಾರ, 2021 ರಲ್ಲಿ ರಸ್ತೆ ಅಪಘಾತಗಳಲ್ಲಿ 17,538 ಕಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
PublicNext
14/01/2022 10:08 pm