ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಕಾರ್ಮಿಕ ನೀತಿ ಜಾರಿ ಸಾಧ್ಯತೆ: ವಾರದಲ್ಲಿ ನಾಲ್ಕು ದಿನ ಕೆಲಸ?

ನವದೆಹಲಿ: ಕೇಂದ್ರ ಸರ್ಕಾರ ಹೊಸ ಕಾರ್ಮಿಕ ಸಂಹಿತೆ ಜಾರಿಗೊಳಿಸುವ ಚಿಂತನೆ ನಡೆಸಿದೆ. ಸಾಮಾಜಿಕ ಭದ್ರತೆ, ವೇತನ, ಮತ್ತು ಔದ್ಯೋಗಿಕ ಸುರಕ್ಷತೆ ದೃಷ್ಟಿಯಿಂದ ಮುಂದಿನ ಹಣಕಾಸು ವರ್ಷದಿಂದ ಈ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹೊಸ ಸಂಹಿತೆ ಅಡಿಯಲ್ಲಿ ಉದ್ಯೋಗ, ಕೆಲಸದ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಅಂಶಗಳು ಬದಲಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ 5 ದಿನಗಳ ಕೆಲಸ ಇರುತ್ತದೆ. ಆದರೆ ಹೊಸ ಸಂಹಿತೆಯಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲು ಅವಕಾಶ ಇರಲಿದೆ. ಆದರೆ 48 ಗಂಟೆಗಳ ಸಾಪ್ತಾಹಿಕ ಕೆಲಸದ ಅವಶ್ಯಕತೆಯನ್ನು ಪೂರೈಸಬೇಕಾಗಿರುವುದರಿಂದ, ನಾಲ್ಕು ದಿನಗಳಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಕಾರ್ಮಿಕ ಇಲಾಖೆ ಸ್ಪಷ್ಟಪಡಿಸಿದೆ.

Edited By : Nagaraj Tulugeri
PublicNext

PublicNext

21/12/2021 07:14 pm

Cinque Terre

27.24 K

Cinque Terre

4