ಕೋಲ್ಕತ : ಭಾರತೀಯ ಕರೆನ್ಸಿ ಮೇಲೆ ಗಾಂಧಿ ಚಿತ್ರ ಇರುವಂತೆ ನೇತಾಜಿ ಚಿತ್ರ ಹಾಕುವ ಬಗ್ಗೆ ಕೋಲ್ಕತಾ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನೇತಾಜಿ ಅವರು ಸ್ವಾತಂತ್ರ್ಯಕ್ಕಾಗಿ ನಡೆಸಿರುವ ಹೋರಾಟ, ಅವರ ದೇಶಭಕ್ತಿ, ಅವರ ಹೋರಾಟದ ಅಣುಅಣುವನ್ನೂ ತೀರಾ ಹತ್ತಿರದಿಂದ ಬಲ್ಲ ಸ್ವಾತಂತ್ರ್ಯಹೋರಾಟಗಾರ 94 ವರ್ಷದ ಹರೇಂದ್ರನಾಥ ಬಿಸ್ವಾಸ್ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಈ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದೆ.
ದೇಶಕ್ಕಾಗಿ ಜೀವತೆತ್ತ ನೇತಾಜಿ ಅವರ ಭಾವಚಿತ್ರವನ್ನು ನೋಟ್ ಗಳಲ್ಲಿ ಮುದ್ರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಬಿಸ್ವಾಸ್ ಅವರು ಈ ಅರ್ಜಿಯಲ್ಲಿ ಕೋರಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಎಂಟು ವಾರಗಳಲ್ಲಿ ಉತ್ತರ ನೀಡುವಂತೆ ಕೋರ್ಟ್ ಕೇಂದ್ರಕ್ಕೆ ಹೇಳಿದೆ.
PublicNext
14/12/2021 07:16 pm