ನವದೆಹಲಿ: ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತವರ ಪತ್ನಿ ಮಧುಲಿಕಾ ಹಾಗೂ ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಸೇರಿದಂತೆ 13 ಮಂದಿ ಪಾರ್ಥಿವ ಶರೀರಗಳನ್ನು ದೆಹಲಿಯ ಪಾಲಂ ಏರ್ಬೇಸ್ಗೆ ತರಲಾಗಿದೆ. ಇದೀಗ ವೀರಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ.
ಸೇನಾಧಿಕಾರಿಗಳ ಪಾರ್ಥಿವ ಶರೀರಗಳಿಗೆ ಪುಷ್ಪಗುಚ್ಚ ಅರ್ಪಿಸಿದ ಮೋದಿ ಕಂಬನಿ ಮಿಡಿದರು. 13 ಮೃತದೇಹಗಳನ್ನು ಭಾರತೀಯ ವಾಯುಪಡೆಯ C-130ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ದೆಹಲಿಗೆ ತರಲಾಗಿದೆ. ಸದ್ಯ ರಾವತ್, ಮಧುಲಿಕಾ, ಎಲ್ಎಸ್ ಲಿಡ್ಡರ್ ಸೇರಿ ನಾಲ್ಕು ದೇಹಗಳನ್ನು ಗುರುತಿಸಲಾಗಿದೆ. ಉಳಿದ ಮೃತದೇಹಗಳನ್ನು ಗುರುತಿಸಲು ಕುಟುಂಬ ಸದಸ್ಯರ ಸಹಾಯ ಸೇನೆ ಪಡೆಯಲಿದೆ ಎಂದು ತಿಳಿದು ಬಂದಿದೆ.
PublicNext
09/12/2021 09:30 pm