ಗಾಂಧಿನಗರ: ಇಂದಿನ ದಿನಮಾನದಲ್ಲಿ ಯಾವುದಾದರೂ ಸರಿ, ಸರ್ಕಾರಿ ನೌಕರಿ ಸಿಕ್ಕರೆ ಸಾಕು ಎನ್ನುವಂತಾಗಿದೆ. ಹೀಗಾಗಿ ಎಲ್ಲ ಹುದ್ದೆಗಳಿಗೂ ಭಾರೀ ಸ್ಪರ್ಧೆ ಉಂಟಾಗಿದೆ. ಹೀಗೆ ಗ್ರಾಮ ರಕ್ಷಾ ದಳದ 600 ಹುದ್ದೆಗಳಿಗಾಗಿ ಯುವ ಜನಸಾಗರವೇ ಹರಿದು ಬಂದ ಪ್ರಸಂಗ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಬನಸ್ಕಾಂತದ ಪಾಲನ್‌ಪುರ ಪ್ರದೇಶದಲ್ಲಿ ಗ್ರಾಮ ರಕ್ಷಾ ದಳದ ದೈಹಿಕ ಪರೀಕ್ಷೆ ನಡೆದಿತ್ತು. ಇಲ್ಲಿ ಸಾವಿರಾರು ಯುವಕರು ಜಮಾಯಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
27/11/2021 10:53 pm