ನವದೆಹಲಿ:ಕೇಂದ್ರ ಸರ್ಕಾರ ಉಚಿತ ಪಡಿತರ ಒದಗಿಸೋ 'ಪಿಎಂ ಗರೀಬ್ ಕಲ್ಯಾಣ್' ಯೋಜನೆಯನ್ನ ಮಾರ್ಚ್-2022 ರವರೆಗೂ ವಿಸ್ತರಿಸುವುದಾಗಿ ಘೋಷಿಸಿದೆ ಎಂದು ಕೇಂದ್ರ ಸರ್ಕಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಸಂಪುಟದ ಈ ನಿರ್ಧಾರದ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಕೋವಿಡ್ ಬಿಕಟ್ಟಿನ ಸಮಯ 2020 ರ ಮಾರ್ಚ್ ನಲ್ಲಿಯೇ ಈ ಯೋಜನೆ ಘೋಷಿಸಲಾಗಿತ್ತು.ಆದರೆ ಇದು ಪ್ರಾರಂಭವಾಗಿರೋದು ಮಾತ್ರ ಏಪ್ರೀಲ್ -ಜೂನ್ ಅಲ್ಲಿ ಆಯಿತು. ಆದರೆ ಇದನ್ನ ಮತ್ತೆ ನವೆಂಬರ್-30 ರ ವರೆಗೂ ವಿಸ್ತರಿಸಲಾಯಿತು.ಈಗ ಸರ್ಕಾರ 2022 ರ ಮಾರ್ಚ್ ವರೆಗೂ ಈ ಯೋಜೆನ ವಿಸ್ತರಿಸಿದೆ ಎಂದು ವಿವರಿಸಿದ್ದಾರೆ ಅನುರಾಗ್ ಠಾಕೂರ್.
PublicNext
24/11/2021 10:56 pm