ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿಗೆ ಹೆಸರುಗಳನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಗಿನಂತಿದೆ.
ಸಾಹಿತ್ಯ ಕ್ಷೇತ್ರ
ಮಹಾದೇವ ಶಂಕನಪುರ – ಚಾಮರಾಜನಗರ
ಪ್ರೊ.ಡಿ.ಟಿ.ರಂಗಸ್ವಾಮಿ – ಚಿತ್ರದುರ್ಗ
ಜಯಲಕ್ಷ್ಮೀ ಮಂಗಳಮೂರ್ತಿ – ರಾಯಚೂರು
ಅಜ್ಜಂಪುರ ಮಂಜುನಾಥ್ – ಚಿಕ್ಕಮಗಳೂರು
ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ – ವಿಜಯಪುರ
ಸಿದ್ಧಪ್ಪ ಬಿದರಿ – ಬಾಗಲಕೋಟೆ
ರಂಗಭೂಮಿ ಕ್ಷೇತ್ರ
ಫಕೀರಪ್ಪ ರಾಮಪ್ಪ ಕೊಡಾಯಿ – ಹಾವೇರಿ
ಪ್ರಕಾಶ್ ಬೆಳವಾಡಿ – ಚಿಕ್ಕಮಗಳೂರು
ರಮೇಶ್ ಗೌಡ ಪಾಟೀಲ್ – ಬಳ್ಳಾರಿ
ಮಲ್ಲೇಶಯ್ಯ ಎನ್ – ರಾಮನಗರ
ಸಾವಿತ್ರಿ ಗೌಡರ್ – ಗದಗ
ಜಾನಪದ ಕ್ಷೇತ್ರ
ಆರ್.ಬಿ ನಾಯಕ – ವಿಜಯಪುರ
ಗೌರಮ್ಮ ಹುಚ್ಚಪ್ಪ ಮಾಸ್ತರ್ – ಶಿವಮೊಗ್ಗ
ದುರ್ಗಪ್ಪ ಚೆನ್ನದಾಸರ – ಬಳ್ಳಾರಿ
ಬನ್ನಂಜೆ ಬಾಬು ಅಮೀನ್ – ಉಡುಪಿ
ಮಲ್ಲಿಕಾರ್ಜುನ ರಾಚಪ್ಪ ಮುದಕವಿ – ಬಾಗಲಕೋಟೆ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ – ಧಾರವಾಡ
ಮಹಾರುದ್ರಪ್ಪ ವೀರಪ್ಪ ಇಟಗಿ – ಹಾವೇರಿ
PublicNext
31/10/2021 05:06 pm