ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರದ ಕೆಲಸ ಇನ್ಮುಂದೆ ಬಹುಬೇಗ ಆಗ್ತವೆ:ನವೆಂಬರ್-1 ರಿಂದ ಹೊಸ ಯೋಜನೆ ಜಾರಿ

ನವದೆಹಲಿ:ಸರ್ಕಾರದ ಕೆಲಸ ದೇವರ ಕೆಲಸ. ಇಲ್ಲಿ ಎಲ್ಲವೂ ಬೇಗ ಆಗೋದೇ ಇಲ್ಲ. ಒಂದು ಫೈಲ್ ಮೂವ್ ಆಗಬೇಕು ಅಂದ್ರೆ ಕೈ ಬಿಸಿ ಮಾಡಬೇಕು . ಇಲ್ಲವೆಂದ್ರೆ ಅದು ಟೇಬಲ್ ನಿಂದ ಟೇಬಲ್ ಗೆ ಹೋಗ್ತಾನೇ ಇರುತ್ತದೆ. ಈ ಒಂದು ಮಾತು ಸರ್ವಕಾಲಿಕ ಸತ್ಯವಾಗಿಯೇ ಉಳಿದಿದೆ. ಆದರೆ ಕೇಂದ್ರ ಸರ್ಕಾರ ಈಗ ಇದಕ್ಕೆ ಬ್ರೇಕ್ ಹಾಕಿದೆ.

ಹೌದು.ಸರ್ಕಾರಿ ಕಚೇರಿಯ ಯಾವುದೇ ಫೈಲ್ ಇದ್ದರೂ ಸರಿಯೇ. ಅದು ತ್ವರತಿಗತಿಯಿಂದಲೇ ವಿಲೇವಾರಿ ಆಗಬೇಕು. ನಾಲ್ಕಕಿಂತಲೂ ಹೆಚ್ಚು ಅಧಿಕಾರಿಗಳ ಟೇಬಲ್ ನಿಂದ ಈ ಫೈಲ್ ಮೂವ್ ಆಗೋ ಹಾಗಿಲ್ಲ. ಬಹುಬೇಗಾನೇ ಈ ಫೈನಲ್ ಗಳು ಒಂದು ಹಂತಕ್ಕೆ ಬಂತು ಇತ್ಯರ್ಥಗೊಳಬೇಕು ಅನ್ನೋದೇ ಕೇಂದ್ರ ಹೊಸ ಯೋಜನೆ (Big Governance Reform )ಉದ್ದೇಶ. ಇದು ಇದೇ ನವೆಂಬರ್-1ರಿಂದಲೇ ಜಾರಿ ಆಗುತ್ತಿದೆ. ಅಲ್ಲಿಗೆ ಸರ್ಕಾರಿ ಕಚೇರಿಗೆ ಅಲೆದಾಡಿ ಕಷ್ಟಪಡೋರಿಗೆ ಒಂದ್ ರೀತಿ ರಿಲೀಫ್ ಸಿಕಂತೆ ಅಲ್ವೇ ?

Edited By :
PublicNext

PublicNext

29/10/2021 04:32 pm

Cinque Terre

30.62 K

Cinque Terre

1

ಸಂಬಂಧಿತ ಸುದ್ದಿ