ಬೆಂಗಳೂರು: ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಇನ್ಮುಂದೆ ಬ್ಯಾಡ್ಜ್ ಕಡ್ಡಾಯ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇಂದಿನಿಂದಲೇ (ಅಕ್ಟೋಬರ್-13) ಈ ಆದೇಶ ಅನ್ವಯವಾಗಲಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಎಲ್ಲ ಸಾರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಬ್ಯಾಡ್ಜ್ ಅವಧಿ ಮುಕ್ತಾಯಗೊಂಡಿದ್ದಲ್ಲಿ ಕೂಡಲೇ ಬ್ಯಾಡ್ಜ ಪಡೆಯಬೇಕಿದೆ. ಇದಕ್ಕಾಗಿ ಸಾರಿಗೆ ಇಲಾಖೆಯ ತಂತ್ರಾಂಶದ ಮೂಲಕ ಬ್ಯಾಡ್ಜ್ ಸಂಖ್ಯೆ ಪಡೆಯಬಹುದಾಗಿದೆ. ಲಘು ಮೋಟಾರು ವಾಹನಗಳ ಮೂಲಕ ಡಿಎಲ್ ಪಡೆದವರು ಆಟೋ ರಿಕ್ಷಾವನ್ನೂ ಚಲಾಯಿಸಬಹುದು ಎಂದು ಕರ್ನಾಟಕ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಹೀಗಾಗಿ ಆಟೋ ರಿಕ್ಷಾ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯ ನಿಯಮವನ್ನು ತೆಗೆಯಲಾಗಿತ್ತು. ಆದರೆ ಈಗ ಮತ್ತೆ ನಿಯಮ ಜಾರಿಗೆ ತರಲಾಗಿದೆ.
PublicNext
13/10/2021 03:39 pm