ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ 9 ತಿಂಗಳ ಕಾಲಮಿತಿ

ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಆಗುತ್ತಿದ್ದ ವಿಳಂಬಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ 9 ತಿಂಗಳ ಕಾಲಮಿತಿಯೊಳಗೆ ಇಡೀ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ನೌಕರರ ಅಕ್ರಮ, ದುರ್ನಡತೆಯು ಶಿಸ್ತಿನ ಪ್ರಾಧಿಕಾರದ ಗಮನಕ್ಕೆ ಬಂದ ಮೇಲೆ ದೋಷಾರೋಪ ಪಟ್ಟಿ ತಯಾರಿಸಲು, ದಾಖಲೆ ಪಡೆಯಲು ಅಥವಾ ಪ್ರಾರಂಭಿಕ ತನಿಖೆ, ವಿಚಾರಣೆ ಅಂತಿಮಗೊಳಿಸಲು ಹಾಗೂ ದೋಷಾರೋಪಪಟ್ಟಿಯನ್ನು ತಯಾರಿಸಿ ಜಾರಿಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಇನ್ನು ತಿಂಗಳೊಳಗೆ ದೋಷಾರೋಪಪಟ್ಟಿಗೆ ನೌಕರನ ವಿವರಣೆ ಪಡೆದು ವಿಚಾರಣಾಧಿಕಾರಿ ನೇಮಿಸಬೇಕಿದೆ. 4 ತಿಂಗಳೊಳಗೆ ವಿಚಾರಣೆ ನಡೆಸಿ ವರದಿ ಮಂಡಿಸಬೇಕು. ಒಂದು ತಿಂಗಳೊಳಗೆ ವರದಿ ಸ್ವೀಕರಿಸಿ ನಿರ್ಣಯ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

Edited By : Vijay Kumar
PublicNext

PublicNext

06/10/2021 04:15 pm

Cinque Terre

22.35 K

Cinque Terre

0

ಸಂಬಂಧಿತ ಸುದ್ದಿ