ಬೆಂಗಳೂರು : ಮಕ್ಕಳು ಯುವಜನರಿಂದ ಹಿಡಿದು ಇಳಿವಯಸ್ಸಿನವರಿಗೂ ಇಷ್ಟವಾಗುವ ಜನಪ್ರಿಯ ಮೊಬೈಲ್ ಗೇಮ್ ಕ್ಯಾಂಡಿ ಕ್ರಷ್ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ರಾಜ್ಯದಲ್ಲಿ ಸರ್ಕಾರ ಕ್ಯಾಂಡಿಕ್ರಶ್ ಗೇಮ್ ನಿಷೇಧ ಮಾಡಲಿದೆ ಎನ್ನಲಾಗುತ್ತಿದೆ.
ಬೆಟ್ಟಿಂಗ್ ಆಪ್ ಜೊತೆಗೆ ಸ್ಕಿಲ್ ಗೇಮ್‌ಗಳನ್ನು ನಿಷೇಧಿಸಬೇಕೆಂಬ ಮಾತುಗಳು ಕೇಳಿಬಂದಿದ್ದು, ಹಣವನ್ನು ಪಣಕ್ಕಿಟ್ಟು ಯಾವೆಲ್ಲಾ ಆಟಗಳು ನಡೆಯುತ್ತವೆಯೋ ಅಂತಹ ಆಟಗಳು ಬ್ಯಾನ್ ಆಗಲಿದೆ.
ಶಾಸಕ ಶರತ್ ಬಚ್ಚೆಗೌಡ ಕ್ಯಾಂಡಿಕ್ರಶ್ ಆಟದ ಬಗ್ಗೆ ಪ್ರಸ್ತಾಪ ಮಾಡಿದ್ದು, ಕ್ಯಾಂಡಿಕ್ರಶ್ ಹಣ ಪಾವತಿಸಿ ಆಟವಾಡಲು ಅವಕಾಶವಿದೆ. ಹೀಗಾಗಿ ಇಂತಹ ಆಪ್‌ಗಳ ಬಗ್ಗೆ ಸರಕಾರ ಯಾವ ನಿರ್ಧಾರ ಕೈಗೊಂಡಿದೆ ಅನ್ನೋ ಪ್ರಶ್ನೆ ಮುಂದಿಟ್ಟಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಹಣ ಪಾವತಿಸಿ ಯಾವೆಲ್ಲಾ ಆಟವನ್ನು ಆನ್ ಲೈನ್ ಮೂಲಕ ಆಡಲು ಅವಕಾಶವಿದೆಯೋ ಅಂತಹ ಆಟವನ್ನು ಬ್ಯಾನ್ ಮಾಡಲಾಗುವುದು ಎಂದಿದ್ದಾರೆ. ಈ ಮೂಲಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಕ್ಯಾಂಡಿಕ್ರಶ್ ಆಡುತ್ತಾ ಟೈಂಪಾಸ್ ಮಾಡ್ತಾರೆ. ಆದ್ರೆ ಇಂತಹ ಕ್ಯಾಂಡಿಕ್ರಶ್ ಪ್ರಿಯರಿಗೆ ರಾಜ್ಯ ಸರಕಾರ ಬಿಗ್‌ಶಾಕ್ ನೀಡಲು ಮುಂದಾಗಿದೆ.
PublicNext
24/09/2021 10:51 pm